Select Your Language

Notifications

webdunia
webdunia
webdunia
webdunia

ಮೂರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ: ನಾಲ್ಕು ಶವ ಪತ್ತೆ

webdunia
ಬುಧವಾರ, 21 ಆಗಸ್ಟ್ 2019 (16:00 IST)
ಇನ್ನೂ ಬಾಳಿ ಬದುಕಬೇಕಿದ್ದ ಮೂರು ಮಕ್ಕಳೊಂದಿಗೆ ಹೆತ್ತ ತಾಯಿಯೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಹೃದಯ ವಿದ್ರಾವಕ ಘಟನೆ ನಡೆದಿದೆ.

ಘಟನೆಯಲ್ಲಿ ಮೂರು ಮಕ್ಕಳೂ ಸೇರಿದಂತೆ ತಾಯಿ ಸಾವನ್ನಪ್ಪಿದ್ದಾರೆ. ಪತಿ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣ ಗಂಡನ ಮನೆಯವರ ದೌರ್ಜನ್ಯದಿಂದ ಬೇಸತ್ತ ಮಹಿಳೆ ತನ್ನ ಮೂರು ಪುಟ್ಟಮಕ್ಕಳೊಂದಿಗೆ ಕಾಲುವೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ರಾಯಚೂರಿನ ನಾರಾಯಣಪುರ ಬಲದಂಡೆ ಮುಖ್ಯ ನಾಲೆಯಲ್ಲಿ ನಾಲ್ವರ ಶವಗಳು ಸಿಕ್ಕಿವೆ. ಮಹ್ಮದ್ ಹನೀಫ್ (5), ಐಯಾನ್(3) ಮತ್ತು ರಿಗಾನ್(1) ಮೃತಪಟ್ಟ ಮಕ್ಕಳಾಗಿದ್ದರೆ, ನಸೀಮಾ(28) ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ಮಹಿಳೆ.
ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮಹಿಳೆಯ ಪತಿಯ ಕುಟುಂಬದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.Share this Story:

Follow Webdunia Hindi

ಮುಂದಿನ ಸುದ್ದಿ

ಹುಡುಗಿ ಜತೆ ಟಿಕ್ ಟಾಕ್ : ಲವರ್ ಗೆ ಬಿತ್ತು ಸಖತ್ ಗೂಸಾ