ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ವ್ಯಕ್ತಿ ಬಾಗಿಲು ತೆಗೆಯಲಿಲ್ಲ ಎಂದು ಮಹಿಳೆಯೊಬ್ಬಳು ಮಾಡಿದ್ದೇನು ಗೊತ್ತಾ?

ಬುಧವಾರ, 21 ಆಗಸ್ಟ್ 2019 (09:32 IST)
ನ್ಯೂಜೆರ್ಸಿ : ಮಹಿಳೆಯೊಬ್ಬಳು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ಪುರುಷನೊಬ್ಬನ ಮನೆಯನ್ನು ಸುಟ್ಟು ಹಾಕಿದ  ಘಟನೆ ನ್ಯೂಜೆರ್ಸಿಯಲ್ಲಿ ನಡೆದಿದೆ.
ವರದಿ ಪ್ರಕಾರ 29 ವರ್ಷದ ತೈಜಾ ರಸ್ಸೆಲ್ ಹೆಸರಿನ ಮಹಿಳೆಗೆ ಪುರುಷನೊಬ್ಬ ಲೈಂಗಿಕ ಕ್ರಿಯೆಗೆ ಬೆಳಿಗ್ಗೆ4  ಗಂಟೆಗೆ ಬರುವಂತೆ ಕರೆ ಮಾಡಿದ್ದಾನೆ. ಆ ವೇಳೆ ಮಹಿಳೆ ಬಂದಾಗ ಆತ ನಿದ್ರೆಗೆ ಜಾರಿದ್ದರಿಂದ ಬಾಗಿಲು ತೆಗೆಯಲಿಲ್ಲ. ಇದರಿಂದ ಕೋಪಗೊಂಡ ಆಕೆ ಆತನ ಮನೆಗೆ ಬೆಂಕಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾಳೆ.


ಆದರೆ ಆ ವ್ಯಕ್ತಿ ಎಚ್ಚರಗೊಂಡಾಗ ಮನೆಯಲ್ಲಾ ಬೆಂಕಿ ಆವರಿಸಿರುವುದನ್ನು ಕಂಡು ರೂಮಿನ ಕಿಟಕಿಯ ಮೂಲಕ ತಪ್ಪಿಸಿಕೊಂಡಿದ್ದಾನೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟ್ರಾಯ್ ಪ್ರಕಾರ 4G ನೆಟ್‌ವರ್ಕ್‌ ನಲ್ಲಿ ಅತಿ ಹೆಚ್ಚು ಸ್ಪೀಡ್ ಹೊಂದಿರುವ ಟೆಲಿಕಾಂಕಂಪೆನಿ ಯಾವುದು ಗೊತ್ತಾ?