ಟ್ರಾಯ್ ಪ್ರಕಾರ 4G ನೆಟ್‌ವರ್ಕ್‌ ನಲ್ಲಿ ಅತಿ ಹೆಚ್ಚು ಸ್ಪೀಡ್ ಹೊಂದಿರುವ ಟೆಲಿಕಾಂಕಂಪೆನಿ ಯಾವುದು ಗೊತ್ತಾ?

ಬುಧವಾರ, 21 ಆಗಸ್ಟ್ 2019 (09:25 IST)
ನವದೆಹಲಿ : ಟೆಲಿಕಾ ಕ್ಷೇತ್ರದಲ್ಲಿ ಜಿಯೋ, ವೊಡಾಫೋನ್, ಐಡಿಯಾ ಮತ್ತು ಏರ್‌ಟೆಲ್‌ ಜೊತೆಗೆ ಸರ್ಕಾರಿ ಸ್ವಾಮ್ಯದ       ಬಿ.ಎಸ್‌.ಎನ್‌.ಎಲ್. ಕೂಡ ಗ್ರಾಹಕರು ತನ್ನತ್ತ ಸೆಳೆಯಲು ಬಾರೀ ಪೈಪೋಟಿ ನಡೆಸುತ್ತಿವೆ. ಈ ನಡುವೆ ಇದೀಗ 4G ನೆಟ್‌ವರ್ಕ್‌ ಸೇವೆಯನ್ನು ಒದಗಿಸುತ್ತಿರುವ ಟೆಲಿಕಾಂಕಂಪೆನಿಗಳಲ್ಲಿ ಯಾವುದು ಅತ್ಯುತ್ತಮ ಸ್ಪೀಡ್ ಹೊಂದಿದೆ ಎಂಬ ವರದಿ ಬಿಡಿಗಡೆಯಾಗಿದೆ.
ಜುಲೈ-2019 ತಿಂಗಳ ಟ್ರಾಯ್ ವರದಿಯ ಪ್ರಕಾರ 4G ನೆಟ್‌ವರ್ಕ್‌ ಡೌನ್‌ಲೋಡ್‌ ವೇಗದಲ್ಲಿ ಜಿಯೋ ಮೊದಲ  ಸ್ಥಾನದಲ್ಲಿದ್ದರೆ, 4G ನೆಟ್‌ವರ್ಕ್‌ನಲ್ಲಿ ಅಪ್‌ಲೋಡ್‌ ಮಾಡುವ ವೇಗದಲ್ಲಿ ವೊಡಾಫೋನ್ 5.8 Mbps ಸಾಮರ್ಥ್ಯದ ಮೂಲಕ ಹೆಚ್ಚು ಸ್ಪೀಡ್‌ ಹೊಂದಿದೆ. ಹಾಗೆಯೇ ಐಡಿಯಾ ನೆಟ್‌ವರ್ಕ್‌ 5.3 Mbps ವೇಗ ಹೊಂದಿದ್ದರೇ, ಜಿಯೋದ ಅಪ್‌ಲೋಡಿಂಗ್‌ ವೇಗವು 4.3Mbps ಆಗಿದೆ. ಹಾಗೂ ಏರ್‌ಟೆಲ್‌ ಸಂಸ್ಥೆಯು 3.2 Mbps ವೇಗದಲ್ಲಿದೆ.


ಜುಲೈ ತಿಂಗಳ ಟ್ರಾಯ್ ವರದಿಯಂತೆ, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು 3G ನೆಟ್‌ವರ್ಕ್‌ನಲ್ಲಿ 2.5 Mbps ವೇಗವನ್ನು ಹೊಂದಿದ್ದು, ಅತಿ ವೇಗದ ಡೌನ್‌ಲೋಡ್‌ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ. ಅದರ ನಂತರ ಐಡಿಯಾ 2Mbps ವೇಗ ಹೊಂದಿದ್ದರೆ, ವೊಡಾಫೋನ್‌ 1.9 Mbps ವೇಗವನ್ನು ಹೊಂದಿದ್ದು, ಏರ್‌ಟೆಲ್‌ ಸಂಸ್ಥೆಯು 1.4 Mbps ವೇಗವನ್ನು ಪಡೆದು ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಸರಕಾರದ ಆಯಸ್ಸು ಆರೇ ತಿಂಗಳು?