Publish Date: Sat, 03 Aug 2019 (06:50 IST)
Updated Date: Sat, 03 Aug 2019 (06:53 IST)
ನವದೆಹಲಿ : ವೊಡಾಫೋನ್ ಐಡಿಯಾ ಸಂಸ್ಥೆ ತನ್ನ ಗ್ರಾಹಕರಿಗಾಗಿ 45ರೂ. ಗಳ ಕಡಿಮೆ ಮಾಸಿಕ ಶುಲ್ಕದ ರಿಚಾರ್ಜ್ ಪ್ಲಾನ್ ನ್ನು ಬಿಡುಗಡೆ ಮಾಡಿದೆ.
ಜಿಯೋ ಮಾರುಕಟ್ಟೆಗೆ ಕಾಲಿಟ್ಟ ನಂತರ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಐಡಿಯಾ ಮತ್ತು ವೊಡಾಫೋನ್ಗಳು ಟೆಲಿಕಾಂಕ್ಷೇತ್ರದಲ್ಲಿ ಗಟ್ಟಿಯಾದ ನೆಲೆಕಂಡುಕೊಳ್ಳಲು ಎರಡು ವಿಲೀನಗೊಳ್ಳುವುದಾಗಿ ಘೋಷಿಸಿ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡಿದವು.
ಆದರೆ ಮಾರ್ಚ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ 33.41 ಕೋಟಿ ಬಳಕೆದಾರರನ್ನು ಹೊಂದಿದ್ದ ವೊಡಾಫೋನ್ ಹಾಗೂ ಐಡಿಯಾ ಜೂನ್ ಅಂತ್ಯಕ್ಕೆ 32 ಕೋಟಿಗೆ ಇಳಿದಿತ್ತು. ಇದೀಗ ಗ್ರಾಹಕರನ್ನು ಉಳಿಸಿಕೊಳ್ಳುವ ಸಲುವಾಗಿ ವೊಡಾಫೋನ್ ಐಡಿಯಾ ಕಡಿಮೆ ಮಾಸಿಕ ಶುಲ್ಕದ ಈ ಹೊಸ ಪ್ಲಾನ್ ನ್ನು ಬಿಡುಗಗಡೆ ಮಾಡಿದೆ. ಈ 45ರೂ. ಗಳ ಪ್ಲಾನ್ ನಲ್ಲಿ 70 ನಿಮಿಷಗಳ ಟಾಕ್ ಟೈಮ್ ಅನ್ನು ಉಚಿತವಾಗಿ ನೀಡುತ್ತಿದೆ.