Select Your Language

Notifications

webdunia
webdunia
webdunia
webdunia

ಗ್ರಾಹಕರೇ ಎಚ್ಚರ! ರಿಲಯನ್ಸ್ ಜಿಯೋ ಗಿಗಾಫೈಬರ್ ನಲ್ಲಿ ಇ ಮೇಲ್ ತೆರೆದರೆ ನಿಮ್ಮ ಹಣ ಮಂಗಮಾಯ

ಗ್ರಾಹಕರೇ ಎಚ್ಚರ! ರಿಲಯನ್ಸ್ ಜಿಯೋ ಗಿಗಾಫೈಬರ್ ನಲ್ಲಿ ಇ ಮೇಲ್ ತೆರೆದರೆ ನಿಮ್ಮ ಹಣ ಮಂಗಮಾಯ
ನವದೆಹಲಿ , ಬುಧವಾರ, 31 ಜುಲೈ 2019 (09:13 IST)
ನವದೆಹಲಿ : ರಿಲಯನ್ಸ್ ಜಿಯೋ ಕಂಪೆನಿಯ ಬಹುನಿರೀಕ್ಷಿತ ಸೇವೆಯಾದ ‘ಗಿಗಾಫೈಬರ್’ ಹೆಸರಿನಲ್ಲಿ ನಕಲಿ ಇ-ಮೇಲ್ ಮತ್ತು ವೆಬ್ ಸೈಟ್ ಗಳನ್ನು ತೆರೆದು ಗ್ರಾಹಕರನ್ನು ವಂಚಿಸುವ ತಂತ್ರ ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.




ಹೌದು. ರಿಲಯನ್ಸ್ ಜಿಯೋ ‘ಗಿಗಾಫೈಬರ್’ ಸೇವೆ ಆರಂಭವಾಗುವ ಬಗ್ಗೆ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಇದರ ಬಗ್ಗೆ ಗ್ರಾಹಕರು ಆಕರ್ಷಿತರಾಗಿದ್ದಾರೆ ಎಂಬುದನ್ನು ಅರಿತ ವಂಚಕರು ರಿಲಯನ್ಸ್ ಜಿಯೋ ಗಿಗಾಫೈಬರ್ ಹೆಸರು, ಬ್ಯಾನರ್ ಮತ್ತು ಪೋಸ್ಟರ್ ಬಳಸಿ ನಕಲಿ ಇ ಮೇಲ್ ಸೃಷ್ಟಿಸಿದ್ದಾರೆ.


ಇದು ನೈಜ ರಿಲಯನ್ಸ್ ಜಿಯೋವನ್ನೇ ಹೋಲುವುದರಿಂದ  ಗ್ರಾಹಕರು ಈ ನಕಲಿ ಇ ಮೇಲ್ ತೆರೆದು ಅದರಲ್ಲಿ ಗ್ರಾಹಕರು ವೈಯಕ್ತಿಕ ವಿವರ, ವಿಳಾಸ, ಬ್ಯಾಂಕ್ ಖಾತೆ ಮಾಹಿತಿ ನಮೂದಿಸಿದರೆ ಸಾಕು, ಗ್ರಾಹಕರ ಖಾತೆಯಲ್ಲಿರುವ ಹಣವೆಲ್ಲ ಖಾಲಿಯಾಗಲಿದೆ ಎನ್ನಲಾಗಿದೆ. ಆದ್ದರಿಂದ ಗ್ರಾಹಕರು ಈ ಬಗ್ಗೆ ಎಚ್ಚರ ವಹಿಸಿ.


Share this Story:

Follow Webdunia kannada

ಮುಂದಿನ ಸುದ್ದಿ

ನೇತ್ರಾವತಿ ನದಿ ಹಿನ್ನೀರು ಪ್ರದೇಶದಲ್ಲಿ ಸಿದ್ದಾರ್ಥ್‌ ಮೃತದೇಹ ಪತ್ತೆ