ನವದೆಹಲಿ : ಮೂರು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು ಆಕೆಯ ಕತ್ತನ್ನೇ ಕತ್ತರಿಸಿದ ಘಟನೆ ಜಾರ್ಖಂಡದ ಜಮ್ಶೆಡ್ಪುರ್ನಲ್ಲಿ ನೆಡೆದಿದೆ.
ಟಾಟಾನಗರ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಮೂರು ವರ್ಷದ ಬಾಲಕಿಯನ್ನು ಮೂವರು ಅಪಹರಣ ಮಾಡಿದ್ದರು. ಬಾಲಕಿ ಕಾಣದೆ ಹೆತ್ತವರು ದೂರು ದಾಖಲಿಸಿದ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿಯ ತಲೆಯಿಲ್ಲದ ದೇಹ ಜಮಶೆಡ್ಪುರದ ಹೊರ ಭಾಗದಲ್ಲಿ ದೊರೆತಿದೆ. ಶ್ವಾನ ದಳದ ಸಹಾಯದಿಂದ ಬಾಲಕಿಯ ತಲೆಯನ್ನು ಪತ್ತೆ ಮಾಡಲಾಗಿದೆ.
ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ತಿಳಿದುಬಂದಿದ್ದು, ತಲೆ ಮರಿಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.