Publish Date: Mon, 19 Aug 2019 (19:29 IST)
Updated Date: Mon, 19 Aug 2019 (19:32 IST)
ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 28 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ. ನಮ್ಮ ಪಕ್ಕದ ಮನೆಯಲ್ಲಿರುವ ಯುವತಿ ತುಂಬಾ ಚೂಟಿಯಾಗಿದ್ದಾಳೆ. 20 ವರ್ಷದ ಆಕೆಯನ್ನ ನೋಡಿದರೆ ಕನಸಲ್ಲೂ ಕಾಡುತ್ತಾಳೆ ಅಂಥ ಸುಂದರಿ. ಆದರೆ ಅವಳು ಅವಳ ಅಪ್ಪನಿಗೆ ಎರಡನೇ ಹೆಂಡತಿ ಮಗಳು.
ಅವಳ ಅಪ್ಪ ತನ್ನಿಬ್ಬರು ಪತ್ನಿಯರಿಗೆ ಬೇರೆ ಮನೆ ಮಾಡಿದ್ದಾನೆ. ಹೀಗಾಗಿ ಎರಡನೇ ಪತ್ನಿ ಮನೆಗೆ ಆತ ಮೊದಲು ಆಗಾಗ ಬರುತ್ತಿದ್ದ. ಆದರೆ ಈಗೀಗ ಭಾನುವಾರ ಮಾತ್ರ ಬರುತ್ತಿದ್ದಾನೆ. ಹೀಗಾಗಿ ಅವನ ಮಗಳು ಒಬ್ಬಳೇ ಮನೆಯಲ್ಲಿರುತ್ತಾಳೆ. ನನ್ನ ಜತೆ ಸಲುಗೆ ಬೆಳೆಸಿಕೊಂಡಿದ್ದಾಳೆ.
ಅಷ್ಟೇ ಅಲ್ಲ ತನ್ನ ಇಷ್ಟ ಕಷ್ಟ ಅದೂ ಇದೂ ಎಲ್ಲಾ ಹೇಳಿಕೊಳ್ಳುತ್ತಾಳೆ. ಒಂದು ದಿನ ರಾತ್ರಿ ಕರೆದು ತನ್ನ ಬಯಕೆ ತೀರಿಸುವಂತೆ ಕೋರಿಕೊಂಡಳು. ಅವಳಾಗಿ ಮೇಲೆ ಬಂದು ಎಲ್ಲಾ ಮಾಡಿದಳು. ಆ ಬಳಿಕ ಸಲುಗೆ ಹೆಚ್ಚಿಸಿಕೊಂಡು ನಿತ್ಯ ಬಾ ಎನ್ನುತ್ತಿದ್ದಾಳೆ. ಇದು ನಮ್ಮ ಮನೆಯಲ್ಲಿ ಗೊತ್ತಾದರೆ ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.
ಉತ್ತರ: ಮದುವೆಗೂ ಮೊದಲೇ ನಿಮ್ಮ ಕಾಮ, ಚಕ್ಕಂದ ಸರಿಯಲ್ಲ. ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಹಗಲು ಕಂಡ ಬಾವಿಗೆ ಹೋಗಿ ರಾತ್ರಿ ಬೀಳದಿರಿ. ಅವಳು ಅಷ್ಟು ಸರಿಯಾಗಿಯೇ ಇದ್ದಿದ್ದರೆ ಈಗಾಗಲೆ ಮದುವೆಗೂ ಮೊದಲೇ ನಿಮ್ಮನ್ನು ಸಂಪರ್ಕ ಮಾಡುತ್ತಿರಲಿಲ್ಲ.
ಅವಳ ಸುಂದರತೆಗೆ, ಮೈ ಮಾಟಕ್ಕೆ ಮನಸೋತು ಮರುಳಾಗಬೇಡಿ. ಶೀಘ್ರವೇ ಆಕೆಯ ಸಂಗದಿಂದ ಹೊರಬನ್ನಿ. ಇದು ನಿಮ್ಮ ಭವಿಷ್ಯಕ್ಕೆ ಮುಂದಿರುವ ದಾರಿ.