ಹುಡುಗಿ ಜತೆ ಟಿಕ್ ಟಾಕ್ : ಲವರ್ ಗೆ ಬಿತ್ತು ಸಖತ್ ಗೂಸಾ

ಬುಧವಾರ, 21 ಆಗಸ್ಟ್ 2019 (15:46 IST)
ತಾನು ಪ್ರೀತಿ ಮಾಡುತ್ತಿದ್ದ ಹುಡುಗಿ ಜೊತೆ ಯುವಕನೊಬ್ಬ ಟಿಕ್ ಟಾಕ್ ಮಾಡಿ ಹುಡುಗಿಯ ಮನೆಮಂದಿಯಿಂದ ಧರ್ಮದೇಟು ತಿಂದಿದ್ದಾನೆ. ಅಷ್ಟೇ ಅಲ್ಲ ಹುಡುಗಿಯೂ ಮನಸೋಇಚ್ಛೆ ತನ್ನ ಲವರ್ ಕೆನ್ನೆಗೆ ಬಾರಿಸಿದ್ದಾಳೆ.

ಕದ್ದು ಮುಚ್ಚಿ ಪ್ರೀತಿ ಮಾಡೋವಾಗ ಮಾಡಿಕೊಂಡಿದ್ದ ಟಿಕ್ ಟಾಕ್ ನ್ನ ಶೇರ್ ಮಾಡಿದ ಪರಿಣಾಮ ಯುವಕನೊಬ್ಬನನ್ನು ಕಟ್ಟಿಹಾಕಿ ಥಳಿಸಲಾಗಿದೆ.

ಯಾದಗಿರಿ ಜಿಲ್ಲೆಯ ಹಳಿಗೇರಾದಲ್ಲಿ ಈ ಪ್ರಕರಣ ನಡೆದಿದ್ದು, ಒಂದೇ ಗ್ರಾಮದ ಯುವಕ- ಯುವತಿಯ ವಿಡಿಯೋ ವೈರಲ್ ಆಗಿದೆ.
ಬುಗ್ಗಪ್ಪ ಪೂಜಾರಿ ಒದೆ ತಿಂದಿರೋ ಯುವಕನಾಗಿದ್ದಾನೆ.

ಪ್ರೇಯಸಿ ಜತೆಗೆ ಮಾಡಿಕೊಂಡಿದ್ದ ಟಿಕ್ ಟಾಕ್ ನ್ನು ವೈರಲ್ ಮಾಡಿದ ಕಾರಣದಿಂದ ಇವರ ಪ್ರೀತಿ ವಿಷಯ ಹಳ್ಳಿಯ ಜನರಿಗೆಲ್ಲಾ ಗೊತ್ತಾಗಿದೆ. ಹೀಗಾಗಿ ಹುಡುಗಿ ಮನೆಯವರು ಬುಗ್ಗಪ್ಪನನ್ನು ಥಳಿಸಿದ್ದಾರೆ.  ಹುಡುಗಿಯೂ ತನ್ನ ಮಾನ ಹರಾಜು ಹಾಕಿದ್ದಕ್ಕೆ ಬುಗ್ಗಪ್ಪನನ್ನು ಹೊಡೆದಿದ್ದಾಳೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಯಾಗದೇ ಒಟ್ಟಿಗೆ ಇದ್ದವಳ ಕಥೆ ಹೀಗಾ ಆಗೋದು