Select Your Language

Notifications

webdunia
webdunia
webdunia
webdunia

ಟಿಕ್ ಟಾಕ್ ಬಳಸುತ್ತಿರುವ ಗ್ರಾಹಕರೇ ಈ ಬಗ್ಗೆ ಎಚ್ಚರವಿರಲಿ

ಟಿಕ್ ಟಾಕ್ ಬಳಸುತ್ತಿರುವ ಗ್ರಾಹಕರೇ ಈ ಬಗ್ಗೆ ಎಚ್ಚರವಿರಲಿ
ನವದೆಹಲಿ , ಭಾನುವಾರ, 18 ಆಗಸ್ಟ್ 2019 (09:49 IST)
ನವದೆಹಲಿ : 'ಟಿಕ್​ ಟಾಕ್' ಆಯಪ್​​ ನಲ್ಲಿ ಬಳಕೆದಾರರಿಗೆ ತಿಳಿಯದಂತೆ ಡೇಟಾವನ್ನು ಕದಿಯುವ ಮೋಸದ ಜಾಲವೊಂದು ಪತ್ತೆಯಾಗಿದೆ ಎಂಬುದಾಗಿ ತಿಳಿದುಬಂದಿದೆ.




ಟಿಕ್​ಟಾಕ್​ ನಕಲಿ ಫೋಟೋಗಳನ್ನು ಬಳಸಿ ಖಾತೆಗಳನ್ನು ತೆರೆಯಲಾಗುತ್ತದೆ. ಬಳಕೆದಾರರು ಈ ಖಾತೆಗಳ ಪ್ರೊಫೈಲ್​​ ಮೇಲೆ ಕ್ಲಿಕ್​ ಮಾಡಿದಂತೆ ವಯಸ್ಕರ ಡೇಟಿಂಗ್​, ಅಶ್ಮೀಲ ಡೇಟಿಂಗ್​ ಸೈಟ್​ಗೆ ಕರೆದೊಯ್ಯುತ್ತದೆ. ವೆಬ್​ಸೈಟ್​ನಲ್ಲಿ ಅಡಕವಾಗಿರುವ ಫೋಟೋ, ವಿಡೀಯೋವನ್ನು ನೋಡಲು ಮುಂದಾದರೆ ಹಣ ಪಾವತಿ ಮಾಡಬೇಕಾಗುತ್ತದೆ.


ಇದರಿಂದ ಗ್ರಾಹಕರ ಮಾಹಿತಿ ಸೋರಿಕೆಯಾಗುತ್ತದೆ. ಅಲ್ಲದೇ ಹಣ ಪಾವತಿಸಿದ ಡೆಬಿಟ್​ ಕಾರ್ಡ್​, ಕ್ರೆಡಿಟ್​ ಕಾರ್ಡ್​ಗಳ ಮಾಹಿತಿಗಳು ಹ್ಯಾಕರ್​ಗಳ ಪಾಲಾಗುತ್ತವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ರಿಕನ್ ಕ್ಯಾಟ್ ಫಿಶ್ ಗೆ ರವಿ ಚನ್ನಣ್ಣನವರ್ ಮಾಡಿದ್ದೇನು?