Select Your Language

Notifications

webdunia
webdunia
webdunia
webdunia

ಆಫ್ರಿಕನ್ ಕ್ಯಾಟ್ ಫಿಶ್ ಗೆ ರವಿ ಚನ್ನಣ್ಣನವರ್ ಮಾಡಿದ್ದೇನು?

ಆಫ್ರಿಕನ್ ಕ್ಯಾಟ್ ಫಿಶ್ ಗೆ  ರವಿ ಚನ್ನಣ್ಣನವರ್ ಮಾಡಿದ್ದೇನು?
ಬೆಂಗಳೂರು , ಶನಿವಾರ, 17 ಆಗಸ್ಟ್ 2019 (18:49 IST)
ರಾಜ್ಯಾದ್ಯಂತ ನಿಷೇಧ ಹೇರಿರುವ ಆಫ್ರಿಕನ್ ಕ್ಯಾಟ್ ಫಿಶ್ ಅನ್ನು ಅಕ್ರಮ ಸಾಕಾಣಿಕೆ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಗ್ರಾಮಾಂತರ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ  ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ, ಬಂಡಹಳ್ಳಿ, ಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ  25 ಕ್ಕೂ ಹೆಚ್ಚು ಕಡೆ ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ನಿಷೇಧಿತ ಆಫ್ರಿಕನ್ ಫಿಶ್ ತೆರವಿಗೆ ಕಾರ್ಯಚರಣೆ ನಡೆಸಲಾಗಿದೆ. ಕಾರ್ಯಚರಣೆಯಲ್ಲಿ ತಾಲ್ಲೂಕು ಆಡಳಿತ ಹಾಗು ಜಿಲ್ಲಾ ಮೀನುಗಾರಿಕೆ ಸೇರಿದಂತೆ ಪಂಚಾಯತಿ ಅಧಿಕಾರಿಗಳ ತಂಡ ತೆರವುಗೊಳಿಸಿತು.

ಕಾರ್ಯಚರಣೆಯ ನೇತೃತ್ವವನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ್ ಹಾಗು ಸಿಬ್ಬಂದಿ ವರ್ಗ ವಹಿಸಿಕೊಂಡಿತ್ತು. ಜೆಸಿಬಿಗಳ ಮುಖಾಂತರ ತೆರವುಗೊಳಿಸಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿ ಪಟಕ್ಕೆ ಸಿವಿಲ್ ಇಂಜಿನಿಯರ್ ಬಲಿ