ಕಡಿಮೆ ಪ್ಲ್ಯಾನ್ ನಲ್ಲಿ ಅಮೆಜಾನ್ ಪ್ರೈಂ ಸದಸ್ಯತ್ವ ನೀಡುತ್ತಿದೆ ಬಿ.ಎಸ್‌.ಎನ್‌.ಎಲ್

ಶನಿವಾರ, 17 ಆಗಸ್ಟ್ 2019 (07:05 IST)
ನವದೆಹಲಿ : ಸರ್ಕಾರಿ ಸ್ವಾಮ್ಯದ ಬಿ.ಎಸ್‌.ಎನ್‌.ಎಲ್ ಗ್ರಾಹಕರನ್ನು ಆಕರ್ಷಿಸಲು ಹೊಸ ಬ್ರಾಡ್‌ ಬ್ಯಾಂಡ್ ಪ್ಲಾನ್ ನ್ನು ಪ್ರಾರಂಭಿಸಿದೆ.ಈ ಹಿಂದೆ ಬಿ.ಎಸ್‌.ಎನ್‌.ಎಲ್ ರೂ. 745 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ನೀಡುತ್ತಿತ್ತು. ಇದೀಗ ಬಿ.ಎಸ್‌.ಎನ್‌.ಎಲ್ ರೂ. 499 ಪ್ಲಾನ್ ನಲ್ಲಿಯೂ ಅಮೆಜಾನ್ ಪ್ರೈಂ ಸದಸ್ಯತ್ವ ನೀಡುವುದಾಗಿ ಘೋಷಿಸಿದೆ.

 

ಇದರಿಂದ ಗ್ರಾಹಕರಿಗೆ ಬಿ.ಎಸ್‌.ಎನ್‌.ಎಲ್ ಬ್ರಾಡ್‌ ಬ್ಯಾಂಡ್ ಸೇವೆಯಲ್ಲಿ ಶೇ. 25 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತಿದೆ. ಹಾಗೇ ಒಂದು ವರ್ಷದ ಬ್ರಾಡ್‌ ಬ್ಯಾಂಡ್ ಪ್ಲಾನ್ ಪಡೆಯುವ ಗ್ರಾಹಕರಿಗೆ ಶೇ. 25ರಷ್ಟು ಕ್ಯಾಶ್‌ಬ್ಯಾಕ್ ಹಾಗೂ ರೂ. 999 ಅಮೆಜಾನ್ ಪ್ರೈಂ ಸದಸ್ಯತ್ವ ನೀಡುವುದಾಗಿ ಹೇಳಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಸಿವಿನಿಂದ ಹಾವೊಂದು ಮಾಡಿದ್ದೇನು ಗೊತ್ತಾ?