Publish Date: Fri, 16 Aug 2019 (18:59 IST)
Updated Date: Fri, 16 Aug 2019 (19:01 IST)
ರಾಜ್ಯ ಸಚಿವ ಸಂಪುಟ ರಚನೆಗೆ ಬಿ.ಎಸ್.ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದರೆ, ಆಕಾಂಕ್ಷಿಗಳು ತಮ್ಮದೇ ರೀತಿಯಲ್ಲಿ ರಾಜಕೀಯ ದಾಳ ಉರುಳಿಸೋಕೆ ಮುಂದಾಗ್ತಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಯಾರಲ್ಲೂ ಸಚಿವ ಸ್ಥಾನ ಕೊಡಿ ಅಂತ ಕೇಳಿಲ್ಲ. ಜಗಳೂರಿಗೆ ನೀರಾವರಿ ಸೌಲಭ್ಯಕ್ಕೆ ಮನವಿ ಮಾಡಿದ್ದೇನೆ. ಸಚಿವ ಸ್ಥಾನವೂ ಕೊಡದೇ ನನ್ನ ಬೇಡಿಕೆ ಈಡೇರಿಸದಿದ್ದರೆ ಮುಂದೆ ಆಲೋಚಿಸುತ್ತೇನೆ ಹೀಗಂತ ಕಮಲ ಪಡೆ ಶಾಸಕ ಪರೋಕ್ಷ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮುಂದೆ ಏನು ಮಾಡಬೇಕೆಂಬ ಬಗ್ಗೆ ಆಲೋಚನೆ ಇದೆ ಅಂತ ದಾವಣಗೆರೆಯಲ್ಲಿ ಜಗಳೂರು ಬಿಜೆಪಿ ಶಾಸಕ ಎಸ್. ವಿ. ರಾಮಚಂದ್ರ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಕುತೂಹಲ ಕೆರಳಿಸಿದೆ ಸಿಎಂ ಬಿ.ಎಸ್.ಯಡಿಯೂರಪ್ಪ ಆಪ್ತ ಶಾಸಕರ ಮಾತು.
ಇನ್ನೂ ಮೂರುವರೆ ವರ್ಷ ಕಾಲಾವಕಾಶ ಇದೆ, ಈಗಲೇ ದುಡುಕಲ್ಲ. ಸಚಿವ ಸ್ಥಾನಕ್ಕೆ ನಾನು ಬೇಡಿಕೆ ಇಟ್ಟಿಲ್ಲ, ನಾನೇನೂ ಸನ್ಯಾಸಿ ಅಲ್ಲ ಅಂತಾನೂ ಹೇಳಿದ್ದಾರೆ. ಸಚಿವ ಸ್ಥಾನವನ್ನ ಹೈಕಮಾಂಡ್ ಕೊಟ್ಟರೆ ನಿಭಾಯಿಸುವೆ ಅಂತ ಹೇಳಿದ್ದಾರೆ.