ಹಸಿವಿನಿಂದ ಹಾವೊಂದು ಮಾಡಿದ್ದೇನು ಗೊತ್ತಾ?

ಶನಿವಾರ, 17 ಆಗಸ್ಟ್ 2019 (06:59 IST)
ಪೆನ್ಸಿಲ್ವೇನಿಯಾ: ಹಸಿವಿನಿಂದ ಹಾವೊಂದು ತನ್ನನ್ನು ತಾನೇ ತಿನ್ನಲು ಮುಂದಾದ ಘಟನೆ ಪೆನ್ಸಿಲ್ವೇನಿಯಾದ ಫರ್ಗಾಟನ್ ಫ್ರೆಂಡ್‌ ಸರೀಸೃಪಗಳ ತಾಣದಲ್ಲಿ ನಡೆದಿದೆ.ಬೇರೆ ಚಿಕ್ಕ ಚಿಕ್ಕ ಹಾವುಗಳನ್ನು ತಿಂದು ತೇಗುವ ಕಾಳಿಂಗ ಸರ್ಪವೊಂದು ಹಸಿವು ತಾಳಲಾರದೆ ತನ್ನ ಬಾಲವನ್ನು ನುಂಗಲು ಶುರು ಮಾಡಿದೆ.  ಆದರೆ ಅದು ತನ್ನ ಬಾಲವೆಂದು ತಿಳಿದರೂ ಕೂಡ ಅದು ಬಿಡಲಿಲ್ಲ.


ತಕ್ಷಣ ಇದನ್ನು ಕಂಡ ಅಲ್ಲಿನ ಸಿಬ್ಬಂದಿಗಳು ಕೊನೆಗೆ ಅದರ ತಲೆಯನ್ನು ಹಿಡಿದು, ಬಾಯಿ ತೆರೆದು ಒತ್ತಾಯಪೂರ್ವಕವಾಗಿ ಬಾಲವನ್ನು ಹೊರತೆಗೆದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಎಂ ಪರಿಹಾರ ನಿಧಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರು ನೀಡಿದ್ದೇನು?