ಪ್ರವಾಹ ಇಳಿತು ಅಂತ ಮನೆಗೆ ಹೋದಳಿಗೆ ಏನಾಯ್ತು?

ಭಾನುವಾರ, 18 ಆಗಸ್ಟ್ 2019 (21:01 IST)
ಪ್ರವಾಹ ಪರಿಸ್ಥಿತಿ ಇಳಿಮುಖ ಆದ ಮೇಲೆ ಆ ಮಹಿಳೆ ತನ್ನ ಮನೆಗೆ ಅಂತ ಹೋಗಿದ್ದಳು. ಆದರೆ ಆ ಮನೆಯಲ್ಲಿ ನಡೆಯಬಾರದ ಘಟನೆ ನಡೆದುಹೋಯಿತು.

ಚಿಕ್ಕೋಡಿ ಭಾಗದಲ್ಲಿ  ನೆರೆಯಿಂದಾಗಿ ದಿನಕ್ಕೊಂದು ಅವಾಂತರ ತಪ್ಪುತ್ತಿಲ್ಲ. ಚಿಕ್ಕೋಡಿಯ ಅಂಕಲಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬಳು ಪರದಾಡಿದ ಘಟನೆ ನಡೆದಿದೆ.

ನೆರೆ ಇಳಿಯಿತು ಎಂದು ಮನೆ ಸ್ವಚ್ಛಗೊಳಿಸಲು ಹೋದ ಮಹಿಳೆಗೆ ಆಘಾತವಾಗಿದೆ. ಮನೆ ಸ್ವಚ್ಛಗೊಳಿಸಲು ಹೋಗಿ ಹಾವು ಕಚ್ಚಿಸಿಕೊಂಡು ಮಹಿಳೆಯ ಪರದಾಟ ಹೇಳತೀರದಾಗಿತ್ತು.

ಅಂಕಲಿ ಗ್ರಾಮವು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮವಾಗಿದೆ.

ಸತತ 11 ದಿನ ಆಶ್ರಯ ಕೇಂದ್ರದಲ್ಲಿದ್ದ ಮಹಿಳೆಗೆ ಹಾವು ಕಚ್ಚಿದೆ. ಸೋನಾತಾಯಿ ಪವನ್ ಕೇಸರಿಕರ್(28) ಗೆ   ಹಾವು ಕಚ್ಚಿದೆ.
ಪ್ರಥಮ‌ ಚಿಕಿತ್ಸೆ ಬಳಿಕ ಅಂಕಲಿಯ ಖಾಸಗಿ ಆಸ್ಪತ್ರೆಗೆ ಸೋನಾತಾಯಿ ದಾಖಲು ಆಗಿದ್ದಾಳೆ.  

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೋನ್ ಕದ್ದಾಲಿಕೆ ಆರೋಪದಿಂದ ನನ್ ಇಮೇಜ್ ಡ್ಯಾಮೇಜ್ ಎಂದ ಹೆಚ್.ಡಿ.ಕೆ?