Select Your Language

Notifications

webdunia
webdunia
webdunia
webdunia

ಭೀಮಾ ನದಿಗೆ 2.74 ಲಕ್ಷ ಕ್ಯೂಸೆಕ್ಸ್ ನೀರು: ಪ್ರವಾಹ ಪರಿಸ್ಥಿತಿ ವೀಕ್ಷಿಸಿದ ಬಿಜೆಪಿ ಸಂಸದ

ಭೀಮಾ ನದಿಗೆ 2.74 ಲಕ್ಷ ಕ್ಯೂಸೆಕ್ಸ್ ನೀರು: ಪ್ರವಾಹ  ಪರಿಸ್ಥಿತಿ ವೀಕ್ಷಿಸಿದ ಬಿಜೆಪಿ ಸಂಸದ
ಕಲಬುರಗಿ , ಶುಕ್ರವಾರ, 9 ಆಗಸ್ಟ್ 2019 (16:46 IST)
ಮಹಾರಾಷ್ಟ್ರದ ಉಜನಿ ಜಲಾಶಯ ಮತ್ತು ವೀರಾ ನದಿಯಿಂದ ನೀರು ಬಿಡುಗಡೆ ಹಿನ್ನಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಮಳುಗಡೆಯಾಗಿರುವ ಬ್ರಿಡ್ಜ್ ಕಮ್ ಬ್ಯಾರೇಜ್, ಬೆಳೆ ಹಾನಿಗೊಳಗಾದ ಪ್ರದೇಶಗಳನ್ನು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ವೀಕ್ಷಿಸಿದ್ರು. ಪ್ರವಾಹಕ್ಕೀಡಾಗುವ ಹಳ್ಳಿಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ರು.

ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ಬ್ರಿಡ್ಜ್ ಕಮ್ ಬ್ಯಾರೇಜ್ ಅನ್ನು ವೀಕ್ಷಿಸಿದರು.  ಪ್ರವಾಹ ಪರಿಸ್ಥಿತಿ ಹಾಗೂ ಇದನ್ನು ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಹಸೀಲ್ದಾರ್, ತಾಂ.ಪಂ.ಕಾರ್ಯನಿರ್ವಾಹಕ ಅಧಿಕಾರಿ, ಇಂಜಿನಿಯರ್ ಮುಂತಾದವರಿಂದ ಮಾಹಿತಿ ಪಡೆದ್ರು.

ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಕೇಂದ್ರವು ರಾಜ್ಯ ಸರ್ಕಾರದೊಂದಿಗಿದ್ದು, ಏನೆಲ್ಲಾ ಪರಿಹಾರಬೇಕು ಅದೆಲ್ಲ ನೀಡಲಿದೆ ಎಂದು ಅವರು ಭರವಸೆ ನೀಡಿದರು. ನದಿ ತೀರಗಳ ಗ್ರಾಮಸ್ಥರು ಯಾವುದೇ ಆತಂಕಕ್ಕೊಳಗಾಗಬಾರದೆಂದು ಧೈರ್ಯ ತುಂಬಿದ ಅವರು ಜನರಿಗೆ ಮನೋಬಲ ತುಂಬಲೆಂದೇ ಇಲ್ಲಿಗೆ ಭೇಟಿ ನೀಡಿರುವುದಾಗಿ ಸಂಸದ ಜಾಧವ್ ಹೇಳಿದ್ರು.

ಘತ್ತರಗಾ ಬ್ರಿಡ್ಜ್, ಸೊನ್ನ ಬ್ಯಾರೇಜ್‍ ಹಾಗೂ ಚಿನ್ಮಳ್ಳಿ ಬ್ರಿಡ್ಜ್ ವೀಕ್ಷಣೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ಯಾಂಡಲ್ ವುಡ್ ಗೆ ಬಂಪರ್