Select Your Language

Notifications

webdunia
webdunia
webdunia
webdunia

ಬತ್ತಿದ ನದಿಗೆ ನೀರು; ಭೀಮಾ ತೀರ ಖುಷ್

ಬತ್ತಿದ ನದಿಗೆ ನೀರು; ಭೀಮಾ ತೀರ ಖುಷ್
ವಿಜಯಪುರ , ಮಂಗಳವಾರ, 2 ಏಪ್ರಿಲ್ 2019 (17:37 IST)
ಬತ್ತಿದ್ದ ಭೀಮಾನದಿಗೆ ಕೊನೆಗೂ ನೀರು ಹರಿಬಿಡಲಾಗಿದೆ.

ಮಹಾರಾಷ್ಟ್ರದ ಉಜನಿ‌ ಜಲಾಶಯದಿಂದ ನೀರು ಬಿಡುಗಡೆ ಆಗಿದೆ. 1850 ಕ್ಯೂಸೆಕ್ ನೀರನ್ನು ಬಿಟ್ಟಿದೆ ಮಹಾರಾಷ್ಟ್ರ ಸರ್ಕಾರ.
ಮಹಾರಾಷ್ಟ್ರದ ಸೊಲ್ಲಾಪುರ ನಗರ ಹಾಗೂ ಅಕ್ಕಲಕೋಟ ಪಟ್ಟಣಕ್ಕೆ ಕುಡಿಯಲು‌ ನೀರು ಹರಿ ಬಿಟ್ಟ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಜಿಲ್ಲೆ ಜನರು ಖುಷ್ ಆಗಿದ್ದಾರೆ.

ಕರ್ನಾಟಕದ ವಿಜಯಪುರ ‌ಜಿಲ್ಲೆಯ ಚಡಚಣ ಹಾಗೂ‌ ಇಂಡಿ ತಾಲೂಕಿನ ಕೆಲ ಗ್ರಾಮದ ಜನರಿಗೆ ಅನಕೂಲವಾಗಿದೆ.
ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಜನರಲ್ಲಿ‌ ಸಂತಸ ತಂದಿದೆ.

ಭೀಮಾ ನದಿ ತಟದ ದಸೂರ್, ಉಮರಜ, ಗೋವಿಂದಪುರ, ರೇವತಗಾಂವ್, ಹೊಳೆಸಂಖ, ಉಮರಾಣಿ  ಹಾಗೂ ಟಾಕಳಿ ಸೇರಿದಂತೆ ವಿವಿಧ ಗ್ರಾಮಗಳ‌ ಜನ ಜಾನುವಾರುಗಳಿಗೆ ಅನಕೂಲ ಆಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಟೂರಿಂಗ್ ಟಾಕೀಸ್ 18 ಕ್ಕೆ ಬಂದ್ !