Publish Date: Thu, 28 Mar 2019 (20:34 IST)
Updated Date: Thu, 28 Mar 2019 (20:35 IST)
ಪ್ರಶ್ನೆ: ನನಗೆ ವಿವಾಹವಾಗಿ ಐದು ತಿಂಗಳಾಗಿದೆ. ಆರಂಭದಲ್ಲಿ ನನ್ನ ಪತ್ನಿ ತುಂಬಾ ಸೆಕ್ಸಿಯಾಗಿ ವರ್ತಿಸುತ್ತಿದ್ದುದಲ್ಲದೇ, ಲೈಂಗಿಕ ತೃಪ್ತಿ ಹೊಂದುವವರೆಗೆ ಬಿಡುತ್ತಿರಲಿಲ್ಲ. ಮತ್ತೊಂದು ಬಾರಿ ಮಾಡುವಂತೆ ಒತ್ತಾಯಿಸುತ್ತಿದ್ದಳು. ಆದರೆ, ಇದೀಗ ಆಕೆಯಲ್ಲಿ ಲೈಂಗಿಕ ನಿರಾಸಕ್ತಿ ಕಾಣುತ್ತಿದೆ ಏಕೆ ಹೀಗೆ?
ವಿವಾಹವಾದ ಆರಂಭದಲ್ಲಿ ನವದಂಪತಿಗಳಿಗೆ ಯಾವ ಕುಟುಂಬದವರು ಡಿಸ್ಟರ್ಬ್ ಮಾಡುವುದಿಲ್ಲ. ನಂತರ ದಿನಗಳೆದಂತೆ ಮನೆಗೆಲಸಗಳ ಒತ್ತಡ ಹೆಚ್ಚಾಗುತ್ತದೆ. ನಿಮ್ಮ ವಿಷಯದಲ್ಲಿ ಹೇಗಿದೆ ಗೊತ್ತಿಲ್ಲ. ಆದರೆ, ಮಹಿಳೆಯರಿಗೆ ಮನೆಗೆಲಸ ,ಕಚೇರಿ ಕೆಲಸಗಳ ಒತ್ತಡ ಹೆಚ್ಚಾಗುತ್ತದೆ. ಇದರಿಂದಾಗಿ ದೇಹ ದಣಿಯುವುದರಿಂದ ಆಕೆಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಪತ್ನಿಯೊಂದಿಗೆ ಮುಕ್ತವಾಗಿ ಮಾತನಾಡಿ ಆಕೆಯ ಮನವನ್ನು ಹಗುರಗೊಳಿಸಿದಾಗ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ.