Publish Date: Sun, 24 Mar 2019 (18:45 IST)
Updated Date: Sun, 24 Mar 2019 (18:46 IST)
ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರ ಬಿಡುಗಡೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
PM ನರೇಂದ್ರ ಮೋದಿ ಸಿನಿಮಾ ಬಿಡುಗಡೆಗೆ ಬೀದರ್ ನಲ್ಲಿ ವಿರೋಧ ವ್ಯಕ್ತವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿ ಇದೆ. ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ ಅದು ಜನರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡದಂತೆ ಹುಮ್ನಾಬಾದ್ ತಹಸಿಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ.
ವಿಶ್ವ ಮಾನವ ಬಂಧುತ್ವ ವೇದಿಕೆ, ದಲಿತ ಸೇನೆಯಿಂದ ಮನವಿ ಸಲ್ಲಿಕೆ ಮಾಡಲಾಗಿದೆ. ಒಂದು ವೇಳೆ ಸಿನಿಮಾ ರಿಲೀಸ್ ಮಾಡಿದ್ದೆ ಆದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಲಾಗಿದೆ.
ತಹಸೀಲ್ದಾರ್ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ನೀಡಿದ ಸಂಘಟನೆಗಳು, ಏ. 5ಕ್ಕೆ ರಿಲೀಸ್ ಆಗಲಿರುವ ಪಿಎಮ್ ನರೇಂದ್ರ ಮೋದಿ ಸಿನೆಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.