Select Your Language

Notifications

webdunia
webdunia
webdunia
webdunia

ಉಮೇಶ್ ಜಾಧವ್ ಟೆಂಪಲ್ ರನ್

ಉಮೇಶ್ ಜಾಧವ್ ಟೆಂಪಲ್ ರನ್
ಯಾದಗಿರಿ , ಭಾನುವಾರ, 24 ಮಾರ್ಚ್ 2019 (18:40 IST)
ಕೈ ಪಾಳೆಯಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಸಫಲವಾಗಿರುವ ಉಮೇಶ್ ಜಾಧವ್ ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ.

ಚಿಂಚೋಳಿ ಶಾಸಕ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರಿಂದ ಟೆಂಪಲ್ ರನ್ ನಡೆಯುತ್ತಿದೆ.

ಗುರುಮಠಕಲ್ ಪಟ್ಟಣದ ಖಾಸಾಮಠಕ್ಕೆ ಭೇಟಿ ನೀಡಿ ಗುರು ಮುರುಘರಾಜೇಂದ್ರ ಗದ್ದುಗೆಯ  ಸ್ವಾಮಿಗಳ ದರ್ಶನ ಪಡೆದರು.
ಬೋರಬಂಡಾ ಗ್ರಾಮದ ಲಕ್ಷ್ಮಿ ತಿಮ್ಮಪ್ಪ ದೇವರ ದರ್ಶನ ಪಡೆದುಕೊಂಡು ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ದೇವರ ಮೊರೆ ಹೋದರು. ಎಪ್ರಿಲ್ 2 ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಕೋಟೆಯ ಕಲ್ಲುಗಳು ಅಂದ್ರೆ ಪಿಲ್ಲರ್ ಗಳು ಈಗ ಬಿಜೆಪಿಗೆ ಬರುತ್ತಿವೆ. ಅಂದ್ರೆ ಬಾಬುರಾವ ಚಿಂಚನಸೂರ, ಮಾಲಿಕಯ್ಯ ಗುತ್ತೆದಾರ, ಮಾಲಕರೆಡ್ಡಿ ಕಾಂಗ್ರೆಸ್ ನ ಪಿಲ್ಲರ್ ಗಳಾಗಿದ್ದರು. ಅವರೇ ಈಗ ಬಿಜೆಪಿಗೆ ಬಂದಿದ್ದಾರೆ. ಡಾ.ಎ.ಬಿ.ಮಾಲಕರೆಡ್ಡಿ ಬಿಜೆಪಿ ಸೇರ್ಪಡೆಯಿಂದ ನನಗೆ ಬಲ ಬಂದಂತಾಗಿದೆ ಅಂತ ಜಾಧವ ಹೇಳಿದ್ದಾರೆ.
ಇನ್ನು ಮಾಜಿ ಸಚಿವ ವೈಜನಾಥ ಪಾಟೀಲ ಬಿಜೆಪಿ ಸೇರುವ ವಿಚಾರಕ್ಕ ಸಂಬಂಧಿಸಿದಂತೆ ಮಾತನಾಡಿದ ಅವರು
ಪಾಟೀಲ್ ಅವರು ಈಗಾಗಲೇ ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ನನ್ನ ಹಿತೈಶಿಗಳು.

100  ಪ್ರತಿಶತ ನನ್ನ ಜೊತೆ ಇರುತ್ತಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಇರಲ್ಲ. ಬಿಜೆಪಿ ಸರಕಾರ ಇರುತ್ತದೆ ಎಂದರು. ಲೋಕಸಭಾ ಚುನಾವಣೆ ನಂತರ ಮೈತ್ರಿ ಸರಕಾರ ಪತನವಾಗುತ್ತದೆ ಎಂದು ಜಾಧವ್ ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಹುಡುಗಿ ಮೌಖಿಕ ಸಂಭೋಗದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾಳೆ ಏನು ಮಾಡಲಿ?