Publish Date: Sat, 23 Mar 2019 (10:33 IST)
Updated Date: Sat, 23 Mar 2019 (10:35 IST)
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜನಪ್ರಿಯರಾಗಿದ್ದ ದಿ. ಜೆ. ಜಯಲಲಿತಾ ಕುರಿತು ಸಿನಿಮಾವೊಂದು ನಿರ್ಮಾಣವಾಗಲಿದೆ.
ಈ ಸಿನಿಮಾಗೆ ‘ತಲೈವಿ’ ಎಂದು ಹೆಸರಿಡಲಾಗಿದೆ. ಎ.ಎಲ್. ವಿಜಯ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿದೆ.
ಆದರೆ ಈ ಸಿನಿಮಾದಲ್ಲಿ ಜಯಲಲಿತಾ ಪಾತ್ರ ಮಾಡಲಿರುವವರು ಯಾರು ಗೊತ್ತೇ? ಕೆಲವು ಮೂಲಗಳ ಪ್ರಕಾರ ಜಯಲಲಿತಾ ಪಾತ್ರಕ್ಕೆ ಬಾಲಿವುಡ್ ನಟಿ ಕಂಗನಾ ರನಾವತ್ ರನ್ನು ಕರೆತರಲಾಗುತ್ತಿದೆಯಂತೆ. ಈಗಾಗಲೇ ಹಲವು ಸವಾಲಿನ ಪಾತ್ರ ಮಾಡಿ ಸೈ ಎನಿಸಿಕೊಂಡಿರುವ ರನಾವತ್ ಜಯಲಲಿತಾ ಪಾತ್ರ ಮಾಡಬೇಕಾದರೆ ಸಾಕಷ್ಟು ತಯಾರಿ ನಡೆಸಬೇಕಾಗುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ