ಚೆನ್ನೈ : ತಮಿಳುನಾಡಿನ ಹೈನು ಅಭಿವೃದ್ಧಿ ಖಾತೆ ಸಚಿವ ಕೆ.ಟಿ.ರಾಜೇಂದ್ರಿಯ ಬಾಲಾಜಿ ಪ್ರಧಾನಿ ಮೋದಿಯವರನ್ನು ಡ್ಯಾಡಿ ಎಂದು ಕರೆದಿದ್ದಾರೆ.
ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರಿನಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, "ಎಐಎಡಿಎಂಕೆ ನಾಯಕಿಯಾಗಿದ್ದ ಅಮ್ಮ (ಜಯಲಲಿತಾ) ಮೃತಪಟ್ಟ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರೇ ತಂದೆಯಾಗಿ ನಮಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಮೋದಿ ಕೇವಲ ಎಐಎಡಿಎಂಕೆಗೆ ಡ್ಯಾಡಿಯಾಗಿರುವುದು ಮಾತ್ರವಲ್ಲದೇ, ಅವರು ಇಡೀ ರಾಷ್ಟ್ರಕ್ಕೇ ತಂದೆಯ ಸ್ಥಾನದಲ್ಲಿರುವವರು " ಎಂದು ಹೇಳಿದ್ದಾರೆ.
“ನಮ್ಮ ಅಮ್ಮ ಇದ್ದಾಗ ಜಯಲಲಿತ ಅವರ ಮಾತೇ ಅಂತಿಮವಾಗಿತ್ತು, ಅವರ ನಿರ್ಧಾರ ತಪ್ಪಾಗುತ್ತಿರಲಿಲ್ಲ, ಸಂಪೂರ್ಣವಾಗಿ ತಮ್ಮ ಕಂಟ್ರೋಲ್ ನಲ್ಲಿಯೇ ಎಲ್ಲವನ್ನೂ ಇರಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರಿಲ್ಲ, ಅವರಿಲ್ಲದ ವೇಳೆಯಲ್ಲಿ ಪ್ರಧಾನಿ ಮೋದಿಯೇ ನಮ್ಮ ಡ್ಯಾಡಿ., ಅವರ ನಾಯಕತ್ವವನ್ನು ನಾವು ಒಪ್ಪಿಕೊಂಡಿದ್ದೇವೆ ಆದ್ದರಿಂದ ಎಐಎಡಿಎಂಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ" ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.