Publish Date: Sat, 18 Aug 2018 (19:12 IST)
Updated Date: Sat, 18 Aug 2018 (19:14 IST)
ಕೆ.ಆರ್.ಎಸ್ ಜಲಾಶಯದಿಂದ 1.25 ಲಕ್ಷ ಕ್ಯೂಸೆಕ್ ನೀರನ್ನ ಹರಿಬಿಡಲಾಗಿದೆ. ಕಾವೇರಿ ನದಿಗೆ ನೀರು ಹರಿಬಿಟ್ಟ ಪರಿಣಾಮ ನದಿ ಪಾತ್ರದ ಬಹುತೇಕ ದೇವಾಲಯಗಳು, ಗ್ರಾಮಗಳು ಮುಳುಗಡೆಯಾಗಿವೆ.
ಶ್ರೀರಂಗಪಟ್ಟಣದ ಶಕ್ತಿ ದೇವತೆ ನಿಮಿಷಾಂಬ ದೇವಾಲಯಕ್ಕೂ ನೀರು ನುಗ್ಗಿದೆ. ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ದೇವಾಲಯದ ಪ್ರಾಂಗಣ ಜಲಾವೃತವಾಗಿದೆ. ದೇವಿಯ ದರ್ಶನ ಮುಗಿಸಿ ದೇವಾಲಯದಿಂದ ಹೊರ ಬರುತ್ತಿದ್ದ ಉತ್ತರ ದ್ವಾರವನ್ನ ಬಂದ್ ಮಾಡಲಾಗಿದೆ. ಪೂರ್ವ ದಿಕ್ಕಿನಲ್ಲೇ ಭಕ್ತರಿಗೆ ವಾಪಸ್ ಬರುವ ವ್ಯವಸ್ಥೆ ಮಾಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಭಕ್ತರು ಇಳಿಯದಂತೆ ಬ್ಯಾರಿಕೇಟ್ ಹಾಕಿ ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.