Publish Date: Sat, 18 Aug 2018 (15:26 IST)
Updated Date: Sat, 18 Aug 2018 (15:41 IST)
ವರುಣನ ರೌದ್ರಾವತಾರ ರಾಜ್ಯದ ಹಲವೆಡೆ ಮುಂದುವರಿದಿದೆ. ಕೆ.ಆರ್.ಎಸ್. ಅಣೆಕಟ್ಟೆಯಿಂದ 1.25 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ಶ್ರೀರಂಗಪಟ್ಟಣ ಬ್ರಿಡ್ಜ್ ಸಂಚಾರ ನಿರ್ಬಂಧ ವಿಧಿಸಲಾಗಿದೆ.
ಕೊಡಗು ಜಿಲ್ಲಾದ್ಯಂತ ವರುಣನ ರೌದ್ರಾವತಾರ ಮುಂದುವರೆದಿದ್ದು, ಕೆ.ಆರ್.ಎಸ್. ಆಣೆಕಟ್ಟೆಯಿಂದ 1.25 ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರನ್ನ ನದಿಗೆ ಬಿಡಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮುಳುಗಡೆಯ ಹಂತ ತಲುಪಿದ್ದು, ಸೇತುವೆ ಮೇಲೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಆದರೂ ಕೆಲವರು ಬ್ಯಾರಿಕೇಡ್ ದಾಟಿ ಸೇತುವೆಯ ಮೇಲೆ ಹೋಗುತ್ತಿದ್ದಾರೆ. ಇದೀಗ ಸೇತುವೆಯ ಎರಡು ಕಡೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಸೇತುವೆ ಮೇಲೆ ಯಾರೂ ಹೋಗದಂತೆ ಕ್ರಮ ವಹಿಸಲಾಗಿದೆ. ನದಿಯಲ್ಲಿ ಇನ್ನುಷ್ಟು ನೀರು ಹೆಚ್ಚಾದ್ರೆ ಸೇತುವೆ ಮುಳುಗಡೆಯಾಗಲಿದೆ.