ತನ್ನ ಪತ್ನಿಯನ್ನು ಪತಿಯೊಬ್ಬ ಸುಪಾರಿ ನೀಡಿ ಕೊಲೆ ಮಾಡಿಸಿರುವ ಪ್ರಕರಣ ಬಯಲಿಗೆ ಬಂದಿದೆ. 
									
										
								
																	
ಪತ್ನಿಯ ಜೊತೆಗೆ ಪತಿ ಹಾಗೂ ಮಗ ಸೇರಿಕೊಂಡು ಆಸ್ತಿ ವಿಷಯವಾಗಿ ಮನೆಯಲ್ಲಿ ಜಗಳವಾಡಿಕೊಂಡಿದ್ದಾರೆ. 
									
			
			 
 			
 
 			
					
			        							
								
																	ಪತ್ನಿಯ ಮೇಲಿನ ಸಿಟ್ಟಿಗೆ ಪತಿ ಹಾಗೂ ಮಗ ಸೇರಿಕೊಂಡು ಆಕೆಯ ಕೊಲೆಗೆ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ. 
									
										
								
																	ಬೆಂಗಳೂರಿನ ಬಂಡೆಪಾಳ್ಯದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಹಾಗೂ ಸುಪಾರಿ ಕಿಲ್ಲರ್ಸ್ ಗಳನ್ನು ಬಂಧನ ಮಾಡಿದ್ದಾರೆ.