ಬೆಂಗಳೂರು : ಸರ್ಕಾರಿ ಅಧಿಕಾರಿಯಿಂದ ಪತ್ನಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಪತ್ನಿ ಸಾವನಪ್ಪಿದ್ದಾರೆ.
									
										
								
																	
ನಾಗವೇಣಿ(41) ಸಾವನಪ್ಪಿದ ಮಹಿಳೆ. ವೆಂಕಟಪ್ಪ ಕೊಲೆ ಮಾಡಿದ ಪತಿ.  ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಈತ ಮಾರ್ಚ್ 3 ರಂದು ಮೈಸೂರು ತಾಲೂಕಿನ ಸೋಮನಾಥನಗರದಲ್ಲಿ ಪತ್ನಿ ಹತ್ಯೆಗೆ ಯತ್ನಿಸಿದ್ದ.
									
			
			 
 			
 
 			
			                     
							
							
			        							
								
																	
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಾಗವೇಣಿ ಅವರನ್ನು ಮೈಸೂರಿನ ಕುವೆಂಪು ನಗರದ ಖಾಸಗಿ ಆಸ್ಪತ್ರೆಗೆ ದಾಕಲಿಸಲಾಗಿತ್ತು. ಆದರೆ ಇದೀಗ ಅವರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.