ಪತ್ನಿ ಕವಿತಾಳನ್ನು ಕೊಂದು ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ದಂತವೈದ್ಯನ ಪ್ರೇಯಸಿಯೂ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಿಕ್ಕಮಗಳೂರಿನ ದಂತವೈದ್ಯ ಡಾ.ರೇವಂತ್ ತನ್ನ ಪತ್ನಿ ಕವಿತಾಳನ್ನು ಕೊಲೆ ಮಾಡಿ ಆ ಬಳಿಕ ಪೊಲೀಸ್ ತನಿಖೆಗೆ ಹೆದರಿ ತಾನೂ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದನು.
ಡಾಕ್ಟರ್ ರೇವಂತ್ ನ ಪ್ರೇಯಸಿ ಹರ್ಷಿತಾ ತನ್ನ ಪ್ರಿಯಕರನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಕ್ರಮ ಸಂಬಂಧ ಹೊಂದಿದ್ದ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ, ಇವರ ಕಾರಣದಿಂದಾಗಿ ಮೂವರು ಮಕ್ಕಳು ಅನಾಥರಾಗಿ, ಪತ್ನಿ ಕೊಲೆಗೀಡಾಗಿದ್ದಾಳೆ.