Select Your Language

Notifications

webdunia
webdunia
webdunia
webdunia

ಮಹಿಳೆ ಮೇಲೆ ಕುಳಿತ ನಾಗರಹಾವು..!

A cobra sitting on a woman
bangalore , ಶನಿವಾರ, 27 ಆಗಸ್ಟ್ 2022 (20:14 IST)
ನಾಗರ ಹಾವು ಹೆಡೆ ಎತ್ತಿ ಕುಳಿತ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದಲ್ಲಿ ನಡೆದಿದೆ. ಮಲ್ಲಾಬಾದ್ ಗ್ರಾಮದ ಭಾಗಮ್ಮ ಬಡದಾಳ್ ತಮ್ಮ ಜಮೀನಿನಲ್ಲಿ ಮಲಗಿದ್ದರು. ಈ ವೇಳೆ ಏಕಾಏಕಿ ನಾಗರಹಾವೊಂದು ಮೈ ಮೇಲೆ ಬಂದಿದ್ದು, ಮಹಿಳೆಯ ತಲೆಯ ಬಳಿ ಕುಳಿತು ಹೆಡೆಬಿಚ್ಚಿ ಬಸುಗುಟ್ಟಿದೆ.ಹಾವನ್ನು ಕಂಡು ಮಹಿಳೆ ಬೆಚ್ಚಿಬಿದ್ದಿದ್ದು, ಶ್ರೀಶೈಲ ಮಲ್ಲಯ್ಯ ಕಾಪಾಡು ಅಂತಾ ಪ್ರಾರ್ಥಿಸಿದ್ದಾರೆ. ಕೆಲ ಸಮಯದ ಬಳಿಕ ಹಾವು ಸ್ಥಳದಿಂದ ತೆರಳಿದೆ. ಭಾಗ್ಯಮ್ಮ ಕೂಡ ಬದುಕಿದೆ ಬಡ ಜೀವವೇ ಎಂದು ದೇವರಿಗೆ ಕೈ ಮುಗಿದಿದ್ದಾರೆ. ಮಹಿಳೆ ಮೇಲೆ ನಾಗರಹಾವು ಹೆಡೆ ಎತ್ತಿ ಕುಳಿತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಲಿಗೆ ಬಿದ್ದು ಮತ ಯಾಚಿಸಿದ ರಾಜಸ್ಥಾನ ವಿದ್ಯಾರ್ಥಿ