Select Your Language

Notifications

webdunia
webdunia
webdunia
webdunia

ಕಾಲಿಗೆ ಬಿದ್ದು ಮತ ಯಾಚಿಸಿದ ರಾಜಸ್ಥಾನ ವಿದ್ಯಾರ್ಥಿ

ಕಾಲಿಗೆ ಬಿದ್ದು ಮತ ಯಾಚಿಸಿದ ರಾಜಸ್ಥಾನ ವಿದ್ಯಾರ್ಥಿ
bangalore , ಶನಿವಾರ, 27 ಆಗಸ್ಟ್ 2022 (20:11 IST)
ರಾಜಸ್ಥಾನದ ವಿದ್ಯಾರ್ಥಿ ಸಂಘದ ಮುಖಂಡರುಗಳು ಕಾಲೇಜು ಹುಡುಗಿಯರ ಕಾಲಿಗೆ ಬಿದ್ದು, ನಮಸ್ಕರಿಸಿ, ರಸ್ತೆಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ತಮಗೇ ಮತ ಹಾಕುವಂತೆ ದುಂಬಾಲು ಬಿದ್ದಿದ್ದಾರೆ. ರಾಜಸ್ಥಾನದ ಬರಾನ್‌ನಲ್ಲಿ ಇಂಥ ವಿಲಕ್ಷಣ ಘಟನೆ ನಡೆದಿದೆ. ಈ ಪ್ರಚಾರತಂತ್ರವನ್ನು ಕಂಡ ಸ್ಥಳೀಯರು ಅಚ್ಚರಿಗೊಳಗಾಗಿದ್ದಾರೆ. ಇಂಥ ಕೆಲವು ಫೋಟೋ, ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇಲ್ಲಿರುವ ಈ ಕ್ಲಿಪ್ ಟ್ವಿಟ್ಟರ್‌ನಲ್ಲಿ ಅನ್‌ಸೀನ್ ಇಂಡಿಯಾ ಎಂಬ ಪುಟದಲ್ಲಿ ಹಂಚಿಕೆಯಾಗಿದೆ. ವಿದ್ಯಾರ್ಥಿ ಸಂಘದ ಚುನಾವಣೆ ಎರಡು ವರ್ಷಗಳ ನಂತರ ಶುಕ್ರವಾರ ರಾಜಸ್ಥಾನದಲ್ಲಿ ನಡೆದಿದೆ. ಇಂದು ಬೆಳಗ್ಗೆ ಮತ ಎಣಿಕೆ ಆರಂಭಗೊಂಡಿದೆ. ಮಧ್ಯಾಹ್ನದ ನಂತರ ಫಲಿತಾಂಶ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಲ್ಫ್ ಮೈದಾನದಲ್ಲಿ ಪತ್ಯಕ್ಷಗೊಂಡಿದ್ದ ಚಿರತೆ