Select Your Language

Notifications

webdunia
webdunia
webdunia
webdunia

ಗಾಲ್ಫ್ ಮೈದಾನದಲ್ಲಿ ಪತ್ಯಕ್ಷಗೊಂಡಿದ್ದ ಚಿರತೆ

A leopard was spotted in the golf course of the district
ಗಾಲ್ಫ್ ಮೈದಾನದಲ್ಲಿ ಪತ್ಯಕ್ಷಗೊಂಡಿದ್ದ ಚಿರತೆಯನ್ನು ಸೆರೆಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದರ ಮುಂದುವರಿದ ಭಾಗವಾಗಿ ಅರಣ್ಯ ಇಲಾಖೆಯು ಚಿರತೆಯನ್ನು ಸೆರೆಹಿಡಿಯಲು ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದ್ದು, ಈ ಯೋಜನೆಯಂತೆ ಇಂದು ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಕಾರ್ಯಾಚರಣೆಯಲ್ಲಿ ಇಂದು ಮತ್ತೆ 200 ಜನರು ‌ಹೆಚ್ಚುವರಿಯಾಗಿ ಭಾಗಿಯಾಗಿದ್ದಾರೆ. ಚಿರತೆ ಪ್ರತ್ಯಕ್ಷಗೊಂಡ ಸುತ್ತಮುತ್ತಲಿನ ಪ್ರದೇಶದಲ್ಲಿನ ಜನರಲ್ಲಿ ಆಂತಕ ಹೆಚ್ಚಿಸಿದ್ದು, ಚಿರತೆಯನ್ನು ಯಾವಾಗ ಸೆರೆ ಹಿಡಿಯಲಾಗೊತ್ತೋ ಎಂಬ ಚಿಂತೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದು ಕೂಡ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸುಮಾರು 22 ಸರ್ಕಾರಿ,‌ ಖಾಸಗಿ ಶಾಲೆಗಳಿಗೆ ಘೋಷಿಸಿದ್ದ ರಜೆಯನ್ನು ಮುಂದುವರಿಕೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ಕೋಳಿಗಳ ಮಾರಣಹೋಮ