Select Your Language

Notifications

webdunia
webdunia
webdunia
webdunia

ಮಾರುಕಟ್ಟೆಯಲ್ಲಿ 40 ನಕಲಿ ಜೌಷಧಿ ಪತ್ತೆ: ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ

40 fake Jaushdhi found in the market

Sampriya

ಬೆಂಗಳೂರು , ಬುಧವಾರ, 22 ಜನವರಿ 2025 (16:46 IST)
ಬೆಂಗಳೂರು: ಸ್ವತಃ ರಾಜ್ಯ ಸರ್ಕಾರವೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಔಷಧಿ ಕೊಟ್ಟು ಜನರನ್ನು ಕೊಲ್ಲುತ್ತಿರುವಾಗ, ಇನ್ನು ಮಾಫಿಯಾಗಳು ಸುಮ್ಮನೆ ಇರುತ್ತವೆಯೇ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಡ್ರಗ್ ಮಾಫಿಯಾ ಜೊತೆ ಶಾಮೀಲಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದ ಮಾರುಕಟ್ಟೆಯಲ್ಲಿ ಸುಮಾರು 40 ನಕಲಿ ಔಷಧಿಗಳು ಪತ್ತೆಯಾಗಿದ್ದು, ಜನಸಾಮಾನ್ಯರ ಪ್ರಾಣವನ್ನ ಅಪಾಯಕ್ಕೆ ದೂಡಿದೆ.

ಸ್ವಾಮಿ ಸಿದ್ದರಾಮಯ್ಯನವರೇ, ಹೆಣ್ಣು ಮಕ್ಕಳ ಭ್ರೂಣ ಹತ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿಗಳಿಂದ ಬಾಣಂತಿಯರ ಸರಣಿ ಸಾವು, ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ, ಈ ರೀತಿ ಎಡವಟ್ಟುಗಳ ಮೇಲೆ ಎಡವಟ್ಟುಗಳು ಮಾಡುತ್ತಿರುವ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ನಿಮ್ಮ ಸರ್ಕಾರದ ದುರಾಡಳಿತಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?

Share this Story:

Follow Webdunia kannada

ಮುಂದಿನ ಸುದ್ದಿ

ಕಾರು ಗುದ್ದಿದ್ದಕ್ಕೆ ನಾಯಿ ರಿವೆಂಜ್ ತೆಗೆದುಕೊಂಡ ಪರಿ ಇದು: ವಿಡಿಯೋ ನೋಡಿ