Select Your Language

Notifications

webdunia
webdunia
webdunia
webdunia

ಹಲವು ನಿಗಮಗಳಿಗೆ ಬಿಡಿಗಾಸೂ ಇಲ್ಲ, ಕೆಲವು ನಿಗಮಗಳಿಗೆ ಬರೀ ಪುಡಿಗಾಸು: ಆರ್‌ ಅಶೋಕ್ ಆಕ್ರೋಶ

Karnataka Congress Government, Opposition Leader R Ashok, Chief Minister Siddaramaiah,

Sampriya

ಬೆಂಗಳೂರು , ಸೋಮವಾರ, 20 ಜನವರಿ 2025 (19:32 IST)
ಬೆಂಗಳೂರು: ಪರಿಶಿಷ್ಟರು, ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕೆ ಸ್ಥಾಪಿಸಲಾಗಿರುವ ಹಲವು ನಿಗಮ ಮಂಡಳಿಗಳಿಗೆ ಬಿಡಿಗಾಸೂ ಅನುದಾನ ಇಲ್ಲದೆ, ಕೆಲವು ನಿಗಮಗಳಿಗೆ ಪುಡಿಗಾಸು ಬಿಡುಗಡೆ ಮಾಡಿರುವ ಕಾಂಗ್ರೆಸ್ ಸರ್ಕಾರ, ನಾಡಿನ ಜನತೆಗೆ ದ್ರೋಹ ಬಗೆದಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಅವರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ರಾಜ್ಯ ಸರ್ಕಾರ 2024- 25ನೇ ಸಾಲಿನ ಅಯವ್ಯಯದಲ್ಲಿ ವಿವಿಧ ಸಮುದಾಯ ಹಾಗೂ ಜಾತಿ ಆಧಾರಿತ ಅಭಿವೃದ್ಧಿ ನಿಗಮಗಳಿಗೆ ಕೋಟ್ಯಂತರ ರೂಪಾಯಿ ಅನುದಾನ  ಮೀಸಲಿಟ್ಟಿದೆ. ಆದರೆ, ಪ್ರಸಕ್ತ ಆರ್ಥಿಕ
ವರ್ಷದ ಅಂತ್ಯಕ್ಕೆ ತಲುಪಿದರೂ ಕೆಲವು ನಿಗಮಗಳಿಗೆ ಅನುದಾನವನ್ನು ಸರ್ಕಾರ ಬಿಡುಗಡೆಮಾಡಿಲ್ಲ. ಈ ಬಗ್ಗೆ ಅವರು ಎಕ್ಸ್‌ನಲ್ಲಿ ಬರೆದು ಆಕ್ರೋಶ ಹೊರಹಾಕಿದ್ದಾರೆ.

ಸ್ವಾಮಿ ಸಿಎಂ ಇದ್ದರಾಮಯ್ಯನವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಇದೇನಾ ಬಡವರು, ಪರಿಶಿಷ್ಟರು, ಹಿಂದುಳಿದವರ ಬಗ್ಗೆ ತಮಗಿರುವ ಕಾಳಜಿ? ಇದೇನಾ ಗಾಂಧಿ ಭಾರತ ನಿರ್ಮಿಸುವ ಪರಿ?

ಅಹಿಂದ ಹೆಸರಿನಲ್ಲಿ ಜನರಿಗೆ ವಿಶ್ವಾಸದ್ರೋಹ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯವನ್ನೇ ಬೆಚ್ಚಿಬೀಳಿಸಿದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಅರೆಸ್ಟ್‌, ಸಿಕ್ಕಿದ್ದೆಲ್ಲಿ ಗೊತ್ತಾ