Select Your Language

Notifications

webdunia
webdunia
webdunia
webdunia

331 ಕೋಟಿ ಬಾಚಿದ ಕಾಶ್ಮೀರ್‌ ಫೈಲ್ಸ್​

331 ಕೋಟಿ ಬಾಚಿದ ಕಾಶ್ಮೀರ್‌ ಫೈಲ್ಸ್​
bangalore , ಮಂಗಳವಾರ, 5 ಏಪ್ರಿಲ್ 2022 (20:20 IST)
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಂಚಲನ ಮೂಡಿಸಿದಷ್ಟೇ ಬಾಕ್ಸ್ ಆಫೀಸಿನಲ್ಲೂ ಅದು ಸದ್ದು ಮಾಡಿತ್ತು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರೇ ತಮ್ಮ ವಿಕಿಪಿಡಿಯಾ ಪೇಜ್ ನಲ್ಲಿ ಬರೆದುಕೊಂಡಂತೆ, ಕೇವಲ 15 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ತಯಾರಿಸಿದ್ದಾರೆ. ಆದರೆ, ಅದು ಮಾಡಿದ ಗಳಿಕೆ ಮಾತ್ರ 331 ಕೋಟಿ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಅವರ ಮೇಲೆ ಆದ ಹಿಂಸಾಚಾರದ ಕುರಿತಾಗಿ ಮಾಡಿರುವ ಸಿನಿಮಾವಿದು. ಹಾಗಾಗಿ ಹಿಂದೂಪರ ಸಂಘಟನೆಗಳು ಸೇರಿದಂತೆ ಹಲವರು ಈ ಸಿನಿಮಾದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದರೆ, ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಿಸಿದವು.  ಪರಿಣಾಮ ಈವರೆಗೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೆ ಹರಿದು ಬಂದ ಮೊತ್ತ 331 ಕೋಟಿಯಾಗಿದೆ.
ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಶೂಟಿಂಗ್​ ಲಾಕ್​ಡೌನ್​ನಿಂದ ಅರ್ಧಕ್ಕೆ ನಿಂತಾಗ ಸೈಡ್​ಲೈನ್​ನಲ್ಲಿ ಮತ್ತೊಂದು ಸಿನಿಮಾದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ ವಿವೇಕ್​.ಈ ಸಿನಿಮಾಗೆ ‘ನೌಟಂಕಿ’ ಎನ್ನುವ ಶೀರ್ಷಿಕೆ ಇಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್​’ನಲ್ಲಿ ಬಹುಮುಖ್ಯ ಪಾತ್ರ ಮಾಡಿರುವ ಅನುಪಮ್​ ಖೇರ್​ ಅವರು ‘ನೌಟಂಕಿಯಲ್ಲಿ’ ಲೀಡ್​​ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಗೆಳೆಯ ಸತೀಶ್ ಕೌಶಿಕ್​ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರೂಮಿ ಜಫ್ರಿ ಅವರರು ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. ವಿವೇಕ್​ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಿದ್ಧಗೊಂಡಿದ್ದು ಹೇಗೆ ಎನ್ನುವ ಬಗ್ಗೆ ವಿವೇಕ್​ ಮಾಹಿತಿ ನೀಡಿದ್ದಾರೆ. ಮಾರ್ಚ್​ ತಿಂಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿದ್ದೆವು. ಆ ಸಂದರ್ಭದಲ್ಲಿ ಕೊರೊನಾದಿಂದ ಲಾಕ್​ಡೌನ್​ ಘೋಷಣೆ ಆಯಿತು. ಅನುಪಮ್​ ಖೇರ್​ ಅವರು ಅಮೆರಿಕದಿಂದ ಶೂಟಿಂಗ್​ಗಾಗಿ ಭಾರತಕ್ಕೆ ಬಂದಿದ್ದರು. ಲಾಕ್​ಡೌನ್​ನಿಂದ ಅವರು ಕೂಡ ಇಲ್ಲೇ ಉಳಿಯಬೇಕಾಯಿತು. ಈ ಸಮಯವನ್ನು ಬಳಕೆ ಮಾಡಿಕೊಳ್ಳಲು ನಾವು ನಿರ್ಧರಿಸಿದೆವು. ಸ್ಕ್ರಿಪ್ಟ್​ ರೆಡಿ ಇತ್ತು. ಹೀಗಾಗಿ ಮತ್ತೊಂದು ಸಿನಿಮಾದ ಶೂಟಿಂಗ್​ಅನ್ನು ಭೋಪಾಲ್​ನಲ್ಲಿ​ ಪೂರ್ಣಗೊಳಿಸಿದೆವು’ ಎಂದಿದ್ದಾರೆ ವಿವೇಕ್​.

Share this Story:

Follow Webdunia kannada

ಮುಂದಿನ ಸುದ್ದಿ

ಐಷಾರಾಮಿ ಬೈಕ್ ಕಳ್ಳತನ ಮಾಡುತ್ತಿದ್ದ ಎಂಜಿನೀರ್ ಅಂಡ್ ಗ್ಯಾಂಗ್ ಅರೆಸ್ಟ್