Publish Date: Tue, 05 Apr 2022 (17:57 IST)
Updated Date: Tue, 05 Apr 2022 (17:59 IST)
ಬೆಂಗಳೂರಿನಲ್ಲಿ ಐಷರಾಮಿ ಬೈಕ್ಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಉತ್ತರಹಳ್ಳಿ ನಿವಾಸಿಯಾಗಿರುವ ವಿಜಯ್, ಹೇಮಂತ್, ಗುಣಶೇಖರ್, ಪುರುಷೋತ್ತಮ್, ಭಾನು, ಕಿರಣ, ಕಾರ್ತಿಕ್ ಬಂಧಿತ ಆರೋಪಿಗಳಾಗಿದ್ದು, ಮೆಕ್ಯಾನಿಕಲ್ ಇಂಜಿನಿಯರ್ ಓದಿರುವ ವಿಜಯ್ ತನ್ನ ಸಹಚರರೊಂದಿಗೆ ಸೇರಿಕೊಂಡು ರಾಯಲ್ ಎನ್ಫೀಲ್ಡ್ ಬೈಕ್ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ.
ರಾತ್ರಿ 12ಗಂಟೆ ಬಳಿಕ ಬೈಕ್ ಇರುವ ಜಾಗಕ್ಕೆ ಹೋಗಿ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಬಳಿಕ ವಿಜಯ್ ಮನೆಗೆ ತಂದು ಹೊಸ ಲಾಕ್ ಜೋಡಿಸಿ ಆಂಧ್ರಪ್ರದೇಶಕ್ಕೆ ರೈಡ್ ಹೋಗಿ ಅಲ್ಲಿ 30ರಿಂದ 40 ಸಾವಿರಕ್ಕೆ ಈ ಕದ್ದ ಬೈಕ್ಗಳನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬೈಕ್ ಕಳ್ಳತನವಾದ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆಗಿಳಿದ ಪೊಲೀಸರು ಆಂಧ್ರಪ್ರದೇಶ ಹಾಗೂ ಬೆಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ 27 ರಾಯಲ್ ಎನ್ಫೀಲ್ಡ್ , 3 ಪಲ್ಸರ್ ಹಾಗೂ ಆಕ್ಟೀವಾ ಬೈಕ್ ಸೇರಿದಂತೆ ಒಟ್ಟು 31 ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.