Publish Date: Fri, 01 Apr 2022 (17:12 IST)
Updated Date: Fri, 01 Apr 2022 (15:16 IST)
ಕೇಂದ್ರ ಗೃಹ ಸಚಿವ ಅಮಿತ್ ಶಾ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದರಿಂದ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ. ಹಾಗಾಗಿ, ಕಾರ್ಯಕ್ರಮಕ್ಕೆ ಬರುವ ಬಸ್, ಟೆಂಪೋ ಟ್ರಾವೆಲ್ಲರ್ ವಾಹನಗಳು ಬಳಸಬೇಕಾದ ರಸ್ತೆ ಮತ್ತು ಪಾರ್ಕಿಂಗ್ ಮಾಹಿತಿ
ರಾಜ್ಯಕ್ಕೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಹಕಾರ ಇಲಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿಯೂ ಅವರು ಭಾಗವಹಿಸಲಿದ್ದು, ಸಾಕಷ್ಟು ಅಭಿಮಾನಿಗಳು ಸೇರುವ ಹಿನ್ನೆಲೆಯಲ್ಲಿ ಅರಮನೆ ರಸ್ತೆಯಲ್ಲಿ ಸಂಚರಿಸಿದರೆ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಲಿದ್ದು ಬದಲಿ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಮೈಸೂರು ರಸ್ತೆ ಕಡೆಯಿಂದ ಬರುವ ಬಸ್‌ಗಳು, ಟೆಂಪೋಗಳು. ಮೈಸೂರು ರಸ್ತೆ - ನಾಯಂಡನಹಳ್ಳಿ - ಎಡ ತಿರುವು ಸುಮ್ಮನಹಳ್ಳಿ - ಡಾ. ರಾಜಕುಮಾರ್ ಸಮಾಧಿ ತುಮಕೂರು ರಸ್ತೆ - ಬಲ ತಿರುವು - ಗೊರಗುಂಟೆಪಾಳ್ಯ ಜಂಕ್ಷನ್ - ಎಡತಿರುವು - ಬಿ.ಇ.ಎಲ್, - ಹೆಬ್ಬಾಳ ಮೇಲು ಸೇತುವೆ - ಮೇಖ್ರಿ ವೃತ್ತ ಸರ್ವೀಸ್ ರಸ್ತೆ - ಜಯಮಹಲ್ ರಸ್ತೆ ಮೂಲಕ ಸಾಗಿ ಸರ್ಕಸ್ ಮೈದಾನ ಆವರಣದಲ್ಲಿ ನಿಲುಗಡೆ ಮಾಡುವುದು.