Publish Date: Thu, 31 Mar 2022 (16:31 IST)
Updated Date: Thu, 31 Mar 2022 (16:34 IST)
ಇಂಡಿಗೋ ವಿಮಾನಯಾನ ಸಂಸ್ಥೆಗೆ ಭಾರೀ ಮುಖಭಂಗವಾಗಿದ್ದು, ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣದ ವೇಳೆ ಕಳೆದು ಹೋದ ತಮ್ಮ ಲಗೇಜ್ ಪತ್ತೆ ಹಚ್ಚಲು ಇಂಡಿಗೋ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡಿದ್ದಾರೆ.
ತನ್ನ ಬ್ಯಾಗ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋದ ಸಹ ಪ್ರಯಾಣಿಕನ ವಿವರ ಪತ್ತೆಹಚ್ಚಲು ಇಂಡಿಗೋ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರಿನ ಟೆಕ್ಕಿ ನಂದನ್ ಕುಮಾರ್ ಅವರು, ಈ ವೆಬ್ ಸೈಟ್ ನಲ್ಲಿ ನಮಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಈ ವೆಬ್ ಸೈಟ್ ತಾಂತ್ರಿಕವಾಗಿ ದುರ್ಬಲವಾಗಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು ಮತ್ತು ಇನ್ನಷ್ಟು ಭದ್ರಪಡಿಸಬೇಕು ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.