Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ಕೊಟ್ಟರೆ ಉಚಿತ ಪ್ರಯಾಣ!

ಪ್ಲಾಸ್ಟಿಕ್ ಕೊಟ್ಟರೆ ಉಚಿತ ಪ್ರಯಾಣ!
ನವದೆಹಲಿ , ಗುರುವಾರ, 3 ಮಾರ್ಚ್ 2022 (12:15 IST)
ಅಬುಧಾಬಿ :  ಪ್ಲಾಸ್ಟಿಕ್ಇಂದು ಪ್ರತಿ ಹಂತದಲ್ಲಿ ನಾವು ಬಳಸುವ ವಸ್ತುವಿನಲ್ಲಿ ಸಿಗುತ್ತಿದೆ. ಕುಡಿಯುವ ನೀರಿನಿಂದ ಮಲಗುವ ಹಾಸಿಗೆವರೆಗೂ ಬಳಸುವ ವಸ್ತುಗಳಲ್ಲಿ ಪ್ಲಾಸ್ಟಿಕ್ ಅಂಶ ಇಲ್ಲದೇ ಬಳಸಲಾಗುವುದೇ ಇಲ್ಲ ಎನ್ನುವಂತಾಗಿದೆ.

ಪ್ಲಾಸ್ಟಿಕ್ನಿಂದ ಎಷ್ಟೋ ಪ್ರಾಣಿ ಸಂಕುಲ ಅಳಿಯುತ್ತಿವೆ. ಮಾಲಿನ್ಯದಿಂದ ಪರಿಸರವೂ ಹಾಳಾಗುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀಡಿದೆರೆ ಸಾರ್ವಜನಿಕ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾದ ಒಂದು ಅವಕಾಶವನ್ನು ಅಬುಧಾಮಿ ಮುನ್ಸಿಪಾಲಿಟಿ ಹಾಗೂ ಸಾರಿಗೆ ಇಲಾಖೆಯ ಸಮಗ್ರ ಸಾರಿಗೆ ಕೇಂದ್ರಗಳು ಕಲ್ಪಿಸಿಕೊಟ್ಟಿವೆ.

ಪರಿಸರ ಸಂಸ್ಥೆ ಅಬುಧಾಬಿ (ಇಎಡಿ), ಅಬುಧಾಬಿ ತ್ಯಾಜ್ಯ ನಿರ್ವಹಣಾ ಕೇಂದ್ರ (ತದ್ವೀರ್) ಮತ್ತು ಡಿ ಗ್ರೇಡ್ ಸಹಯೋಗದಲ್ಲಿ ಈ ಅಭಿಯಾನ ಶುರುವಾಗಿದೆ. ಬಿಸಾಡುವ ಪ್ರತಿ ಬಾಟಲ್ ಅನ್ನು ಉಚಿತ ಪ್ರಯಾಣಕ್ಕೆ ಬಳಸಬಹುದಾಗಿದೆ. 

ನೀರು, ತಂಪು ಪಾನೀಯ ಅಥವಾ ಯಾವುದೇ ದ್ರವ್ಯ ಸೇವಿಸಿದ ಬಳಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಅಲ್ಲಲ್ಲೇ ಬಿಸಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಒಮ್ಮೆ ಕಸದ ತೊಟ್ಟಿಗೂ ಹಾಕಿದರೂ ಕೂಡ ಅದು ಸಂಸ್ಕರಣೆಗೊಳ್ಳುವುದಿಲ್ಲ. ಎಲ್ಲೆಂದರಲ್ಲಿ ಈ ಪ್ಲಾಸ್ಟಿಕ್ ಬಿಸಾಡಿ ಉಂಟಾಗುವ ಮಾಲಿನ್ಯ ತಪ್ಪಿಸಬೇಕು ಹಾಗೂ ತ್ಯಾಜ್ಯ ನಿರ್ವಹಣೆ ಸರಿಯಾಗಿ ಆಗಬೇಕು ಎಂಬ ಉದ್ದೇಶದಿಂದ ಅಬುಧಾಬಿ ಸರ್ಕಾರ ಹೀಗೊಂದು ಆಫರ್ ನೀಡಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಹಣ ವಾಪಸ್ ಕೇಳಿದ್ದೇ ತಪ್ಪಾಯ್ತ! ಮುಂದೇನಾಯ್ತು?