Publish Date: Fri, 11 Feb 2022 (09:20 IST)
Updated Date: Fri, 11 Feb 2022 (09:42 IST)
ನವದೆಹಲಿ: ಸಹ ಪ್ರಯಾಣಿಕ ಸಿಗರೇಟ್ ಸೇದಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಲಾಗಿದೆ.
ಶೇರ್ ಆಟೋದಲ್ಲಿ ಮಹಿಳೆಯ ಜೊತೆ ಬ್ಯಾಂಕ್ ಉದ್ಯೋಗಿಯೊಬ್ಬ ಪ್ರಯಾಣ ಮಾಡುತ್ತಿದ್ದ. ಈ ವೇಳೆ ಆತ ಸಿಗರೇಟು ಸೇದಲು ಆರಂಭಿಸಿದಾಗ ಮಹಿಳೆ ಪ್ರಶ್ನಿಸಿದ್ದಳು. ಆದರೆ ಆತ ಸೊಪ್ಪು ಹಾಕದೇ ಇದ್ದಾಗ ಮಹಿಳೆಯೇ ಆತನ ಬಾಯಿಯಲ್ಲಿದ್ದ ಸಿಗರೇಟು ಕಿತ್ತೆಸೆದಿದ್ದಳು.
ಇದರಿಂದ ಸಿಟ್ಟಿಗೆದ್ದ ಆರೋಪಿ ಮಹಿಳೆಯ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಆಟೋ ಚಾಲಕ ಆಟೋ ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪ್ರಕರಣ ದಾಖಲಾಗಿದೆ.