Select Your Language

Notifications

webdunia
webdunia
webdunia
webdunia

ಪೊಲೀಸರಿಗೇ ಬಿತ್ತು ಧರ್ಮದೇಟು!

ಪೊಲೀಸರಿಗೇ ಬಿತ್ತು ಧರ್ಮದೇಟು!
ಲಕ್ನೋ , ಗುರುವಾರ, 10 ಫೆಬ್ರವರಿ 2022 (09:00 IST)
ಲಕ್ನೋ: ಜನ ರೊಚ್ಚಿಗೆದ್ದರೆ ಏನು ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಇದು ಉದಾಹರಣೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಪೊಲೀಸರಿಗೇ ಜನರು ಧರ್ಮದೇಟು ನೀಡಿದ ಘಟನೆ ನಡೆದಿದೆ.

ಗ್ರಾಮವೊಂದರಲ್ಲಿ ಚರಂಡಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಜಗಳವಾಗುತ್ತಿತ್ತು. ಈ ಜಗಳ ಬಿಡಿಸಲು ಹೋದ ಪೊಲೀಸರಿಗೇ ಗ್ರಾಮಸ್ಥರು ಹೊಡೆದ ಘಟನೆ ನಡೆದಿದೆ.

ಪೊಲೀಸರಿಗೇ ಜನರು ದೊಣ್ಣೆಯಿಂದ ಹೊಡೆದಿದ್ದು, ಪರಿಣಾಮ ಓರ್ವ ಪೇದೆಗೆ ಗಾಯವಾಗಿದೆ. ಜನರ ಆಕ್ರೋಶ ಕಂಡು ಪೊಲೀಸರು ಸ್ಥಳದಿಂದ ಕಾಲುಕಿತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೊದಲ ಹಂತದ ಮತದಾನ