Publish Date: Wed, 09 Feb 2022 (10:40 IST)
Updated Date: Wed, 09 Feb 2022 (10:47 IST)
ಬೆಂಗಳೂರು: ವೆಬ್ ಸೀರೀಸ್ ನಲ್ಲಿ ಅವಕಾಶ ಕೊಡುವುದಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಯಿಯ ಜೊತೆ ಹೊರಗೆ ಹೋಗಿದ್ದಾಗ ಹಿಂಬಾಲಿಸಿದ್ದ ವ್ಯಕ್ತಿ ಸಿನಿಮಾ ನಿರ್ಮಾಪಕನೆಂದು ಹೇಳಿಕೊಂಡಿದ್ದು, ವೆಬ್ ಸೀರೀಸ್ ನಲ್ಲಿ ಅವಕಾಶ ಕೊಡುವುದಾಗಿ ಹಿಂಬಾಲಿಸಿದ್ದಾನೆ. ಆದರೆ ಯುವತಿ ತಿರಸ್ಕರಿಸಿದ್ದಾಳೆ. ಬಳಿಕ ಯುವತಿ ಹೋದಲೆಲ್ಲಾ ಆತನೂ ಹಿಂಬಾಲಿಸಿಕೊಂಡು ಬಂದಿದ್ದಾನೆ.
ಇದರಿಂದ ಭಯಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.