Publish Date: Thu, 10 Feb 2022 (09:40 IST)
Updated Date: Thu, 10 Feb 2022 (09:50 IST)
ಬೆಂಗಳೂರು: ಪತ್ನಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕೆ ಆಟೋ ಚಾಲಕನೊಬ್ಬ ಸ್ನೇಹಿತನನ್ನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
39 ವರ್ಷದ ವಿಶ್ವನಾಥ್ ಕೊಲೆಗೀಡಾದಾತ. ಈತನಿಗೆ ಆರೋಪಿ ಪತ್ನಿಯ ಜೊತೆ ಅಕ್ರಮ ಸಂಬಂಧವಿತ್ತು. ಆರೋಪಿ ಪತಿ ಮನೆಯಲ್ಲಿಲ್ಲದ ವೇಳೆ ವಿಶ್ವನಾಥ್ ಮನೆಗೆ ಬರುತ್ತಿದ್ದ.
ಸ್ನೇಹಿತನ ಪತ್ನಿ ಜೊತೆ ಚಕ್ಕಂದವಾಡುತ್ತಿದ್ದ. ಈ ವಿಚಾರವಾಗಿ ಈಗಾಗಲೇ ಆರೋಪಿ ಸ್ನೇಹಿತ ವಿಶ್ವನಾಥ್ ಗೆ ಎಚ್ಚರಿಕೆ ನೀಡಿದ್ದ. ಆದರೆ ಮೊನ್ನೆ ಆರೋಪಿ ಮನೆಗೆ ಬರುವ ವೇಳೆ ಇಬ್ಬರೂ ಸಲುಗೆಯಿಂದಿರುವುದು ಕಂಡುಬಂದಿತ್ತು. ಇದೇ ಆಕ್ರೋಶದಲ್ಲಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಪೊಲೀಸರು ಈಗ ಆರೋಪಿಯನ್ನು ಬಂಧಿಸಿದ್ದಾರೆ.