Select Your Language

Notifications

webdunia
webdunia
webdunia
webdunia

ಒಂದೇ ಕುಟುಂಬದ ಐವರ ಕೊಲೆ- ಸಣ್ಣ ಸುಳಿವಿಂದ ಪ್ರಕರಣ ಭೇದಿಸಿದ ಪೊಲೀಸರು

ಒಂದೇ ಕುಟುಂಬದ ಐವರ ಕೊಲೆ- ಸಣ್ಣ ಸುಳಿವಿಂದ ಪ್ರಕರಣ ಭೇದಿಸಿದ ಪೊಲೀಸರು
bangalore , ಬುಧವಾರ, 9 ಫೆಬ್ರವರಿ 2022 (20:56 IST)
ಮದುವೆಯಾಗಿದ್ದ ಪರ ಪುರುಷನ ಆಸೆಗೋಸ್ಕರ ನಾಲ್ವರು ಮಕ್ಕಳು ಸೇರಿದಂತೆ ಐವರನ್ನು ದಾರುಣವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ಜರುಗಿದೆ.
ಫೆಬ್ರವರಿ 6ರಂದು ಮಂಡ್ಯದ ಕೆಆರ್ ಎಸ್‍ನ ಬಜಾರ್ ಲೈನ್ ಬಡಾವಣೆಯಲ್ಲಿ ಜನರು ಬೆಚ್ಚಿ ಬೀಳುವ ಘಟನೆಯೊಂದು ನಡೆದಿತ್ತು. ಮಹಿಳೆ ಸೇರಿದಂತೆ ನಾಲ್ವರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಸುದ್ದಿ ಕೇಳಿ ಇಡೀ ಕೆಆರ್‍ಎಸ್ ಜನತೆ ಆತಂಕ ವ್ಯಕ್ತಪಡಿಸಿದ್ದರು. ಕೆಆರ್‍ಎಸ್‍ನ ಭೈಯಾದ್ ಜನಾಂಗದ ನಿವಾಸಿ ಗಂಗಾರಾಮ್ ಪತ್ನಿ ಮತ್ತು ಮಕ್ಕಳಾದ ಲಕ್ಷ್ಮೀ (32), ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ (8) ಅಂದು ಕೊಲೆಯಾದ ದುರ್ದೈವಿಗಳು. ಈ ಪ್ರಕರಣ ಭೇದಿಸಲು ಸಣ್ಣ ಸುಳಿವು ಸಿಗದ ಕಾರಣ ಪೊಲೀಸರಿಗೆ ತಲೆ ನೋವು ಉಂಟು ಮಾಡಿತ್ತು ಈ ಪ್ರಕರಣ.
ಹೀಗಿದ್ದರು ಸಹ ಕೃತ್ಯ ನಡೆದ ಎರಡೇ ದಿನಗಳಲ್ಲಿ ಆರೋಪಿಯನ್ನು ಬಂಧಿಸಿದ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಮುಗ್ಧ ಜೀವಗಳ ಕೊಲೆಗೆ ಗಂಡ ಗಂಗಾರಾಮ್‍ನ ಅಕ್ರಮ ಸಂಬಂಧವೇ ಕಾರಣ ಎಂದು ಇದೀಗ ತಿಳಿದು ಬಂದಿದೆ. ಗಂಗಾರಾಮ್ ಸಂಬಂಧಿ ಲಕ್ಷ್ಮೀ(34) ನಡುವೆ ಲವ್ ಡವ್ವಿ ಇದ್ದು, ಈಕೆ ನನ್ನನ್ನು ಮದುವೆಯಾಗು ಎಂದು ಹಿಂದಿನಿಲೂ ಈತನನ್ನು ಪೀಡಿಸುತ್ತಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಲಕ್ಷ್ಮೀಯನ್ನು ಮದುವೆಯಾಗಿದ್ದ. ಇದಾದ ಬಳಿಕವೂ ಸಹ ಗಂಗಾರಾಮ್ ಮತ್ತು ಕೊಲೆ ಪಾತಕಿ ಲಕ್ಷ್ಮಿ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಇದರ ನಡುವೆ ಅವಳು ಹಾಗೂ ಮಕ್ಕಳನ್ನು ಬಿಟ್ಟು ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದಳು.
ಇವರನ್ನು ಕೊಲೆ ಮಾಡಿದರೆ ನನಗೆ ಗಂಗಾರಾಮ್ ಸುಲಭವಾಗಿ ಸಿಗುತ್ತಾನೆ ಎಂದು ಫೆಬ್ರವರಿ 5ರ ರಾತ್ರಿ ಮೃತ ಲಕ್ಷ್ಮೀ ಮನೆಗೆ ಈ ಹಂತಕಿ ಲಕ್ಷ್ಮಿ ಬಂದಿದ್ದು, ಜೊತೆಯಲ್ಲಿ ಊಟ ಮಾಡಿದ್ದಾಳೆ. ನಂತರ ಎಲ್ಲರೂ ನಿದ್ರೆಗೆ ಜಾರಿದ ಬಳಿಕ ಎಲ್ಲರನ್ನು ಒಬ್ಬಳೇ ಹತ್ಯೆ ಮಾಡಿದ್ದಾಳೆ. ಊಟದಲ್ಲಿ ಮತ್ತು ಬೆರೆಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗುತ್ತಿದೆ. ಈ ಕೊಲೆಯನ್ನು ತಾನು ತಂದಿದ್ದ ಸುತ್ತಿಗೆಯಿಂದ ಮೊದಲು ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾಳೆ. ನಂತರ ಎಚ್ಚರಗೊಂಡಿದ್ದ ಮಕ್ಕಳ ಮೇಲೂ ಸುತ್ತಿಗೆಯಿಂದ ಹಲ್ಲೆ ಮಾಡಿ, ಸುತ್ತಿಗೆಯಿಂದ ಹಲ್ಲೆ ಬಳಿಕವೂ ಲಕ್ಷ್ಮೀ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ಐವರನ್ನ ಕೊಲೆಗೈದು 2-3 ಗಂಟೆ ಅದೇ ಮನೆಯಲ್ಲಿ ಈ ಕೊಲೆಗಾತಿ ಲಕ್ಷ್ಮಿ ಕಾಲಕಳೆದಿದ್ದಾಳೆ.
ಬೆಳಗ್ಗಿನ ಜಾವ 4ಗಂಟೆ ಸಮಯದಲ್ಲಿ ಕೆಆರ್‍ಎಸ್‍ನಿಂದ ಬಸ್ ಮೂಲಕ ಮೈಸೂರಿಗೆ ಪ್ರಯಾಣ ಮಾಡಿ, ಅಲ್ಲಿ ಸ್ವಲ್ಪವೊತ್ತು ಕಾಲ ಕಳೆದು ಬೆಳಗ್ಗೆ 10 ಗಂಟೆ ವೇಳೆಗೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಕೊಲೆ ಸ್ಥಳಕ್ಕೆ ವಾಪಸ್ ಬಂದಿದ್ದಾಳೆ. ಮೃತರ ಮನೆ ಮುಂದೆ ಕುಳಿತು ಎಲ್ಲರಿಗೂ ಮಂಕುಬೂದಿ ಎರೆಚಲು ಕಣ್ಣೀರು ಹಾಕಿ ಡ್ರಾಮಾ ಮಾಡಿದ್ದಳು. ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಕ್ಯಾಮೆರಾ ದೂರ ತೆಗೆದುಕೊಂಡು ಹೋಗಿ ಎಂದು ಅವಾಜ್ ಸಹ ಹಾಕಿದ್ದಳು.

Share this Story:

Follow Webdunia kannada

ಮುಂದಿನ ಸುದ್ದಿ

650 ಮಂದಿ ಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ