Select Your Language

Notifications

webdunia
webdunia
webdunia
webdunia

ರಾತ್ರಿ ಮಲಗಿದ್ದಾಗ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ರಾತ್ರಿ ಮಲಗಿದ್ದಾಗ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು
ಮಂಡ್ಯ , ಭಾನುವಾರ, 6 ಫೆಬ್ರವರಿ 2022 (10:26 IST)
ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರ ಕೊಲೆಯಾಗಿದೆ.

ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ನಾಲ್ವರು ಮಕ್ಕಳು, ಮಹಿಳೆಯನ್ನು ಹತ್ಯೆಗೈದಿದ್ದಾರೆ. ಲಕ್ಷ್ಮೀ(26), ರಾಜ್(12), ಕೋಮಲ್(7), ಕುನಾಲ್(4), ಗೋವಿಂದ(8) ಕೊಲೆಯಾದವರು.

ಸ್ಥಳಕ್ಕೆ ಕೆಆರ್‌ಎಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭೀಕರ ಕೃತ್ಯಕ್ಕೆ ಕೆಆರ್‌ಎಸ್ ಗ್ರಾಮ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾವಾಗಿದೆ.

ಪತಿ ಗಂಗಾರಾಮ್ 10 ದಿನದ ಹಿಂದೆ ವ್ಯಾಪಾರಕ್ಕೆ ಹೋಗಿದ್ದರು. ಗಂಗಾರಾಮ್ ಪ್ಲಾಸ್ಟಿಕ್ ಹೂವು ಸೇರಿ ಹಲವು ವಸ್ತುಗಳ ಮಾರಾಟ ಮಾಡುತ್ತಿದ್ದರು. ಒಮ್ಮೆ ವ್ಯಾಪಾರಕ್ಕೆ ಹೋದರೆ 15 ದಿನ, 1 ತಿಂಗಳು ಬಿಟ್ಟು ಬರುತ್ತಿದ್ದರು. ಗಂಗಾರಾಮ್ ಅಣ್ಣ ಗಣೇಶ್ ಪತ್ನಿ ಚಂಪಾಡಿ ಸಹಾ ವ್ಯಾಪಾರಕ್ಕೆ ತೆರಳಿದ್ದರು. ಇವರೆಲ್ಲಾ ಒಟ್ಟಿಗೆ ವಾಸವಾಗಿದ್ದರು.

ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿಎನ್ ಯತೀಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್‌ಪಿ ಸಂದೇಶ್ ಕುಮಾರ್ ಸೇರಿ ಹಲವು ಹಿರಿಯ ಅಧಿಕಾರಿಗಳು ಇದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಹಾಡು ಹಾಕಲು ಹೇಳಿದ್ದಕ್ಕೆ ಪಬ್ ನಲ್ಲಿ ಹಲ್ಲೆ ಮಾಡಿದ ಡಿಜೆ