Publish Date: Fri, 11 Feb 2022 (08:05 IST)
Updated Date: Fri, 11 Feb 2022 (09:08 IST)
ನವದೆಹಲಿ : ಮೊಘಲ್ ಗಾರ್ಡನ್ಸ್ ಫೆಬ್ರವರಿ 12ರ ಶನಿವಾರದಿಂದ ಮಾರ್ಚ್ 16 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ರಾಷ್ಟ್ರಪತಿ ಭವನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಂಗಡ ಆನ್‌ಲೈನ್ ಬುಕಿಂಗ್ ಮೂಲಕ ಮಾತ್ರ ಪ್ರವಾಸಿಗರಿಗೆ ಉದ್ಯಾನವನವನ್ನು ನೋಡಲು ಅವಕಾಶ ನೀಡಲಾಗುತ್ತದೆ ಎಂದು ಅದು ಹೇಳಿದೆ. https://rashtrapatisachivalaya.gov.in ಮೂಲಕ ಗಾರ್ಡನ್ ವೀಕ್ಷಣೆಗೆ ಬುಕ್ಕಿಂಗ್ ಮಾಡಬಹುದು.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಗುರುವಾರ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ಉದ್ಘಾಟಿಸಿದರು.
ಮೊಘಲ್ ಗಾರ್ಡನ್ಸ್ ಫೆಬ್ರವರಿ 12, 2022 ರಿಂದ ಮಾರ್ಚ್ 16, 2022 ರವರೆಗೆ (ನಿರ್ವಹಣಾ ದಿನಗಳಾದ ಸೋಮವಾರದಂದು ಹೊರತುಪಡಿಸಿ) ಪ್ರತಿದಿನ 10:00 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭೇಟಿಯ ಸಂದರ್ಭದಲ್ಲಿ ಕೊರೊನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.