Publish Date: Sun, 14 Nov 2021 (16:58 IST)
Updated Date: Sun, 14 Nov 2021 (17:00 IST)
ಬೆಂಗಳೂರು: ಭಜರಂಗಿ 2 ಸಿನಿಮಾವನ್ನು ಇಂದು ಪ್ರೇಕ್ಷಕರ ಜೊತೆ ಕೂತು ನೋಡಿದ ನಟ ಶಿವರಾಜ್ ಕುಮಾರ್ ಬಳಿಕ ಅಭಿಮಾನಿಗಳಿಗೆ ಊಟ ವಿತರಿಸಿದ್ದಾರೆ.
ಇಂದು ಮಧ‍್ಯಾಹ್ನದ ಶೋವನ್ನು ಅನುಪಮ ಥಿಯೇಟರ್ ನಲ್ಲಿ ಅಭಿಮಾನಿಗಳ ಜೊತೆ ಕೂತು ವೀಕ್ಷಿಸಿದ ಶಿವಣ್ಣ ಅಭಿಮಾನಿಗಳಿಗೆ ಊಟದ ಏರ್ಪಾಟು ಮಾಡಿದ್ದಾರೆ.
ಸ್ವತಃ ತಾವೇ ಕೈಯಾರೆ ಸರತಿಯಲ್ಲಿ ಬಂದ ಅಭಿಮಾನಿಗಳಿಗೆ ಊಟ ಬಡಿಸಿ ಖುಷಿಪಟ್ಟಿದ್ದಾರೆ. ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 12 ನೇ ದಿನದ ಸಮಾರಾಧನೆಯಂದು ದೊಡ್ಮನೆ ಕಡೆಯಿಂದ 40 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮತ್ತೆ ಶಿವಣ್ಣ ಊಟದ ವ್ಯವಸ್ಥೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.