Publish Date: Sun, 14 Nov 2021 (12:08 IST)
Updated Date: Sun, 14 Nov 2021 (09:09 IST)
ಬೆಂಗಳೂರು: ಗಾಂಧಿನಗರದಲ್ಲಿ ಈ ವೀಕೆಂಡ್ ನಲ್ಲಿ ಬಿಡುಗಡೆಯಾದ ಎರಡು ಸಿನಿಮಾಗಳು ಭರ್ಜರಿ ಸದ್ದು ಮಾಡುತ್ತಿದೆ.
ಹೊಸಬರ ಟಾಮ್ ಆಂಡ್ ಜೆರಿ ಗೆದ್ದಿದೆ. ಕೆಜಿಎಫ್ ಡೈಲಾಗ್ ರೈಟರ್ ರಾಘವ್ ವಿನಯ್ ನಿರ್ದೇಶಿಸಿರುವ ಟಾಮ್ ಆಂಡ್ ಜೆರಿ ಯುವಜನರಿಗೆ ಇಷ್ಟವಾಗಿದೆ. ಯುವ ಮನಸ್ಸಿಗೆ ನಾಟುವ ಹಾಗೆ ಜೀವನದ ಪಾಠ ಹೇಳಿಕೊಡುವ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ನೆನಪಿರಲಿ ಪ್ರೇಮ್ ಬಹಳ ದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಸಿನಿಮಾ ಪ್ರೇಮಂ ಪೂಜ್ಯಂ. ಈ ಸಿನಿಮಾವನ್ನೂ ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ. ನವಿರಾದ ಪ್ರೇಮ ಕತೆ ಜೊತೆಗೆ ಪ್ರೇಮಿಗಳಿಗೆ ಪಾಠವೂ ಈ ಸಿನಿಮಾದಲ್ಲಿದೆ. ಹೀಗಾಗಿ ಇದೂ ನಿರ್ಮಾಪಕರಿಗೆ ಹಾಕಿದ ಬಂಡವಾಳಕ್ಕೆ ಮೋಸ ಮಾಡದು. ವೀಕೆಂಡ್ ನಲ್ಲಿ ಫ್ಯಾಮಿಲಿ ಸಮೇತ ನೋಡಬಹುದಾದ ಚಿತ್ರಗಳು ಇದಾಗಿದೆ.