Select Your Language

Notifications

webdunia
webdunia
webdunia
webdunia

ಪುನೀತ್ ಪುತಳಿ ನಿರ್ಮಾಣ

Puneet rajkumar
ಬೆಂಗಳೂರು , ಶನಿವಾರ, 13 ನವೆಂಬರ್ 2021 (14:35 IST)
ಡಾ.ರಾಜ್ ಪುತ್ಥಳ ತಯಾರಿಸಿದ್ದ ಶಿಲ್ಪಿ ಶಿವದತ್ತ ಅವರೇ ಪುನೀತ್ ಪುತ್ಥಳಿ ತಯಾರು ಮಾಡ್ತಿದ್ದಾರೆ.ನಾನೇ ರಾಜಕುಮಾರ' ಹಾಡಿನಲ್ಲಿ ಬಂದು ಕೂರುವ ಪಾರಿವಾಳ ಸಮೇತ ಈ ಪುತ್ಥಳಿ ತಯಾರಾಗ್ತಿರೋದು ವಿಶೇಷವಾಗಿದೆ. ಮನೆಯಲ್ಲಿಡಲು ಅಭಿಮಾನಿಗಳಿಂದ ಅಪ್ಪು ಪುಟ್ಟ ಶಿಲ್ಪ ಸ್ಮರಣಿಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 400 ಶಿಲ್ಪ ಸ್ಮರಣಿಕೆಗೆ ಬೇಡಿಕೆ ಬಂದಿದ್ದು, ಅದರ ತಯಾರಿಕಾ ಕೆಲಸವೂ ನಡೆಯುತ್ತಿದೆ ಅಂತ ಶಿವದತ್ತ ಹೇಳಿದ್ದಾರೆ.ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನದ ಬಳಿಕ ಅನೇಕ ಮಾನವೀಯ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ಹಲವರು ನೇತ್ರದಾನ, ದೇಹದಾನಕ್ಕೆ ಸಹಿ ಮಾಡಿದ್ದರೆ, ಇನ್ನೂ ಕೆಲವರು ಅವರ ಫೋಟೋಗಳನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುತ್ತಿದ್ದಾರೆ. ಅಪ್ಪು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇದೀಗ ಅವರ ಈ ಕೆಲಸಗಳನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಮುಂದುವರಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಕ್ಸಿನ್ ಬೇಡವೆಂದರೆ ಸಿಂಗಪೂರ್ ಮಾಡಲ್ ಜಾರಿ ...!!