Select Your Language

Notifications

webdunia
webdunia
webdunia
webdunia

‘100’ ಸಿನಿಮಾ ವೀಕ್ಷಿಸಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ

‘100’ ಸಿನಿಮಾ ವೀಕ್ಷಿಸಲಿರುವ ಗೃಹ ಸಚಿವ ಅರಗ ಜ್ಞಾನೇಂದ್ರ
ಬೆಂಗಳೂರು , ಶುಕ್ರವಾರ, 12 ನವೆಂಬರ್ 2021 (09:15 IST)
ಬೆಂಗಳೂರು: ರಮೇಶ್ ಅರವಿಂದ್ ನಿರ್ದೇಶಿಸಿ, ನಟಿಸಿರುವ ಸೈಬರ್ ಕ್ರೈಂ ಆಧಾರಿತ ಕತೆಯಿರುವ ‘100’ ಸಿನಿಮಾವನ್ನು ವೀಕ್ಷಿಸಲು ಗೃಹ ಸಚಿವ ಅರಗ ಜ್ಞಾನೇಂದ್ರಗೆ ಆಹ್ವಾನ ನೀಡಲಾಗಿದೆ.

ಸೈಬರ್ ಕ್ರೈಂ ಕುರಿತಾದ ಕತೆಯಿರುವ ಕಾರಣ ಈ ಸಿನಿಮಾ ಸಮಾಜಕ್ಕೆ ಒಳ್ಳೆಯ ಪಾಠವಾಗಲಿದೆ. ಒಂದು ಸಾಮಾನ್ಯ ಕುಟುಂಬ ಸೈಬರ್ ವಂಚನೆಗೊಳಗಾಗುವ ಕತೆ ಇದರಲ್ಲಿದೆ. ಹೀಗಾಗಿ ಈ ಸಿನಿಮಾವನ್ನು ಗೃಹ ಸಚಿವರಿಗೆ ತೋರಿಸಲು ಚಿತ್ರತಂಡ ನಿರ್ಧರಿಸಿದೆ.

ಇದಕ್ಕಾಗಿ ಖುದ್ದಾಗಿ ರಮೇಶ್ ಅರವಿಂದ್ ಮತ್ತು ತಂಡ ಗೃಹ ಸಚಿವರನ್ನು ಭೇಟಿಯಾಗಿ ಸಿನಿಮಾ ವೀಕ್ಷಿಸಲು ಆಹ್ವಾನ ನೀಡಿದ್ದಾರೆ. ನವಂಬರ್ 19 ರಂದು ಚಿತ್ರ ತೆರೆಗೆ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಮೇಲಿನ ಪ್ರೀತಿಯಿಂದ ಸ್ಕ್ರಿಪ್ಟ್ ಹರಿದು ಹಾಕಿದ ನಿರ್ದೇಶಕ