Publish Date: Sat, 13 Nov 2021 (16:40 IST)
Updated Date: Sat, 13 Nov 2021 (16:43 IST)
ಬೆಂಗಳೂರು: ಏಕ್ ಲವ್ ಯಾ ಅಡಿಯೋ ಲಾಂಚ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ಜೊತೆಗೆ ನಿರ್ಮಾಪಕಿ ರಕ್ಷಿತಾ ಪ್ರೇಮ್, ನಟಿ ರಚಿತಾ ರಾಮ್ ಕೂಡಾ ಕ್ಷಮೆ ಯಾಚಿಸಿದ್ದಾರೆ.
ವೇದಿಕೆಯಲ್ಲಿ ಅಪ್ಪು ಫೋಟೋ ಇರಿಸಿ, ಅವರ ಎದುರೇ ಶಾಂಪೈನ್ ಬಾಟಲಿ ಓಪನ್ ಮಾಡಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ನಿರ್ದೇಶಕ ಪ್ರೇಮ್ ಮಾಧ್ಯಮಗಳ ಮುಂದೆ ಕ್ಷಮ ಕೇಳಿದ್ದರು.
ಇದಾದ ಬಳಿಕ ರಕ್ಷಿತಾ ಪ್ರೇಮ್, ರಚಿತಾ ರಾಮ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಅವಮಾನಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಹಾಗಿದ್ದರೂ ನಮ್ಮಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ ಎಂದಿದ್ದಾರೆ.