Publish Date: Wed, 20 Oct 2021 (12:32 IST)
Updated Date: Wed, 20 Oct 2021 (08:51 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ನಟಿ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಅವರ ಮುಂಬರುವ ಚಿತ್ರಗಳ ಲಿಸ್ಟ್ ಕಡೆ ನೋಡೋಣ.
ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು: ರಮೇಶ್ ಅರವಿಂದ್ ನಾಯಕರಾಗಿರುವ 100, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ, ತೆಲುಗಿನ ಸೂಪರ್ ಮಚ್ಚಿ, ಮಾನ್ಸೂನ್ ರಾಗ ಸಿನಿಮಾಗಳ ಚಿತ್ರೀಕರಣ ಮುಗಿದು ಈಗ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳು. ಈ ಪೈಕಿ ಏಕ್ ಲವ್ ಯಾ ದಲ್ಲಿ ರಚಿತಾರದ್ದು ಅತಿಥಿ ಪಾತ್ರ.
ಚಿತ್ರೀಕರಣದಲ್ಲಿರುವ ಸಿನಿಮಾಗಳು: ಡಿಂಪಲ್ ಕ್ವೀನ್ ಕೈಯಲ್ಲಿ ಚಿತ್ರೀಕರಣ ಹಂತದಲ್ಲಿ ಸಾಕಷ್ಟು ಸಿನಿಮಾಗಳಿವೆ. ಪ್ರಜ್ವಲ್ ದೇವರಾಜ್ ನಾಯಕರಾಗಿರುವ ವೀರಂ, ಅಜೇಯ್ ರಾವ್ ಜೊತೆಗಿನ ಲವ್ ಯೂ ರಚ್ಚು, ಮ್ಯಾಟಿನಿ, ಏಪ್ರಿಲ್, ಲಿಲ್ಲಿ, ಬ್ಯಾಡ್ ಮ್ಯಾನರ್ಸ್, ಶಬರಿ, ಲವ್ ಮಿ ಆರ್ ಹೇಟ್ ಮಿ, ರವಿ ಬೋಪಣ್ಣ, ಡಾಲಿ, ಪಂಕಜ ಕಸ್ತೂರಿ, ಪಂತ, ಮತ್ತು ಇತ್ತೀಚೆಗೆ ಒಪ್ಪಿಕೊಂಡ ಪ್ಯಾನ್ ಇಂಡಿಯಾ ಸಿನಿಮಾ ಕ್ರಾಂತಿ. ಈ ಲಿಸ್ಟ್ ನಲ್ಲಿ ಲಿಲ್ಲಿ, ಏಪ್ರಿಲ್, ಶಬರಿ, ಪಂಕಜ ಕಸ್ತೂರಿ ಮುಂತಾದ ಸಿನಿಮಾಗಳು ಮಹಿಳಾ ಪ್ರಧಾನ ಕತೆಗಳನ್ನು ಹೊಂದಿವೆ.