Select Your Language

Notifications

webdunia
webdunia
webdunia
webdunia

‘ಸಲಗ’ ಒಟಿಟಿ ರಿಲೀಸ್ ಬಗ್ಗೆ ದುನಿಯಾ ವಿಜಯ್ ಸ್ಪಷ್ಟನೆ

‘ಸಲಗ’ ಒಟಿಟಿ ರಿಲೀಸ್ ಬಗ್ಗೆ ದುನಿಯಾ ವಿಜಯ್ ಸ್ಪಷ್ಟನೆ
ಬೆಂಗಳೂರು , ಮಂಗಳವಾರ, 19 ಅಕ್ಟೋಬರ್ 2021 (10:30 IST)
ಬೆಂಗಳೂರು: ಸಲಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ವದಂತಿಗಳ ಬಗ್ಗೆ ನಟ, ನಿರ್ದೇಶಕ ದುನಿಯಾ ವಿಜಯ್ ಸ್ಪಷ್ಟನೆ ನೀಡಿದ್ದಾರೆ.


ಸಲಗ ಸಿನಿಮಾ ಒಟಿಟಿಯಲ್ಲಿ ತೆರೆ ಕಾಣಲ್ಲ. ಬೇಕೆಂದೇ ಯಾರೋ ನಮ್ಮ ಸಿನಿಮಾ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಥಿಯೇಟರ್ ನಲ್ಲಿಯೇ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವಾಗ ಒಟಿಟಿಯಲ್ಲಿ ರಿಲೀಸ್ ಮಾಡಲ್ಲ. ಹಾಗೆ ಮಾಡುವುದಿದ್ದರೆ ಮೊದಲೇ ನಮಗೆ ಆಫರ್ ಬಂದಿತ್ತು. ಆಗಲೇ ಕೊಟ್ಟಿಲ್ಲ. ಈಗ ಜನ ಚಿತ್ರಮಂದಿರಕ್ಕೇ ಬಂದು ಸಿನಿಮಾ ನೋಡುತ್ತಾರೆ ಎಂದು ದುನಿಯಾ ವಿಜಿ ಹೇಳಿದ್ದಾರೆ.

ಈ ಮೂಲಕ ಒಟಿಟಿ ರಿಲೀಸ್ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತದೆ ಎಂದರೆ ಚಿತ್ರಮಂದಿರಗಳಿಗೆ ಜನ ಬರುವುದು ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಸ್ಟೈಲಿಶ್ ಲುಕ್ ಗಾಗಿ ಜೇಮ್ಸ್ ಚಿತ್ರೀಕರಣಕ್ಕೆ ಬ್ರೇಕ್!